Webdunia - Bharat's app for daily news and videos

Install App

ಅಭಿಮಾನಿ ಮೇಲೆ ಸಿಟ್ಟಿಗೆದ್ದ ಜ್ಯೂ ಎನ್ ಟಿಆರ್

Krishnaveni K
ಶುಕ್ರವಾರ, 26 ಏಪ್ರಿಲ್ 2024 (14:07 IST)
Photo Courtesy: Twitter
ಮುಂಬೈ: ಸಿನಿಮಾ ಸ್ಟಾರ್ ಗಳು ತಮ್ಮ ಖಾಸಗಿ ಬದುಕನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಧಕ್ಕೆಯಾದಾಗ ಸಿಟ್ಟಿಗೇಳುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ.

ಇದೀಗ ಜ್ಯೂ ಎನ್ ಟಿಆರ್ ಅಭಿಮಾನಿಯ ಮೇಲೆ ಸಿಟ್ಟಿಗೆದ್ದ ಘಟನೆ ನಡೆದಿದೆ. ಜ್ಯೂ ಎನ್ ಟಿಆರ್ ಇದೀಗ ವಾರ್ 2 ಸಿನಿಮಾ ಶೂಟಿಂಗ್ ಗಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ತಾರಕ್ ಉಳಿದುಕೊಂಡಿದ್ದಾರೆ. ಅಲ್ಲಿಯೂ ಅವರಿಗೆ ಅಭಿಮಾನಿಗಳು ಕಡಿಮೆಯೇನಲ್ಲ.

ಜ್ಯೂ ಎನ್ ಟಿಆರ್ ತಮ್ಮ ಫೋನ್ ನಲ್ಲಿ ಮಾತನಾಡುತ್ತಾ ಹೋಟೆಲ್ ರೂಂಗೆ ತೆರಳುತ್ತಾರೆ. ಈ ವೇಳೆ ಅವರ ಸೆಕ್ಯುರಿಟಿ ಗಾರ್ಡ್ ಗಳೂ ಜೊತೆಗಿರುತ್ತಾರೆ. ಆದರೆ ಅಭಿಮಾನಿಯೊಬ್ಬ ಕ್ಯಾಮರಾ ಹಿಡಿದುಕೊಂಡು ಜ್ಯೂ ಎನ್ ಟಿಆರ್ ನನ್ನು ಹಿಂಬಾಲಿಸುತ್ತಿರುತ್ತಾರೆ. ಮೊದಲು ಆತನನ್ನು ಜ್ಯೂ ಎನ್ ಟಿಆರ್ ಕಡೆಗಣಿಸುತ್ತಾರೆ.

ಆದರೆ ಆ ಅಭಿಮಾನಿ ಹಿಂಬಾಲಿಸುವುದನ್ನು ಮುಂದುವರಿಸಿದಾಗ ಸಿಟ್ಟಿಗೆದ್ದ ಜ್ಯೂ ಎನ್ ಟಿಆರ್ ಫೋನ್ ನಲ್ಲಿ ಮಾತನಾಡುವುದನ್ನೂ ನಿಲ್ಲಿಸಿ ‘ಓಯ್ ಸಾಕು ನಿಲ್ಸಪ್ಪಾ ಎಂದು ಗದರುತ್ತಾರೆ. ಅಭಿಮಾನಿ ತನ್ನ ಖಾಸಗಿತನಕ್ಕೆ ಧಕ್ಕೆ ತಂದಿದ್ದು ಜ್ಯೂ ಎನ್ ಟಿಆರ್ ಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.  ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments