ಮುಂಬೈ : ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಕಿಡ್ನಿ ಕಳೆದುಕೊಂಡು ಸಾವು-ಬದುಕಿನ ಜೊತೆ ಹೋರಾಟ ನಡೆಸುತ್ತಿರುವ ತಮ್ಮ ಆಪ್ತ ಸ್ನೇಹಿತನಿಗೆ ಸಹಾಯ ಮಾಡಿ ದೇವತೆ ಎನಿಸಿಕೊಂಡಿದ್ದಾರೆ.
ಹೌದು. ಸನ್ನಿ ಲಿಯೋನ್ ಆಪ್ತ ಸಹಾಯಕ ಪ್ರಭಾಕರ್ ಎಂಬಾತ ಕಳೆದ ಒಂದು ವರ್ಷದಿಂದ ಅನಾರೋಗ್ಯ ದಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರಂತೆ. ಆದರೆ ಆತನಿಗೆ ನಿಜವಾದ ಕಾಯಿಲೆ ಏನು ಎಂಬುದು ಗೊತ್ತಿರಲಿಲ್ಲವಂತೆ. ಈ ಕುರಿತು ವಿಚಾರಿಸಿದ ಸನ್ನಿ, ನಂತರ ಆತನನ್ನು ಒಳ್ಳೆಯ ಆಸ್ಪತ್ರೆಗೆ ದಾಖಲಿಸಿದಾಗ ಆ ವೇಳೆ ಆತನ ಕಿಡ್ನಿ ವೈಫಲ್ಯವಾಗಿರುವುದು ತಿಳಿದುಬಂದಿದೆ.
ಸಂಪೂರ್ಣ ಕಿಡ್ನಿ ವೈಫಲ್ಯದಿಂದ ಬದಲಿಗೆ ಅದೇ ರಕ್ತ ಮಾದರಿ ಹೊಂದುವ ಕಿಡ್ನಿಯನ್ನು ಅಳವಡಿಸುವ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ ಕಾರಣ ಕಿಡ್ನಿ ದಾನಿಗಳಿಗಾಗಿ ಹುಡುಕಾಟ ಕೂಡ ನಡೆದಿದೆಯಂತೆ. ಅಲ್ಲದೇ ಪ್ರಭಾಕರ್ ಅವರ ಆರೋಗ್ಯ ಜವಾಬ್ದಾರಿಯನ್ನು ಸನ್ನಿ ಲಿಯೋನ್ ಹೊತ್ತಿದ್ದಾರೆ. ಈ ನಿಟ್ಟಿನಲ್ಲಿ ಇದುವರೆಗೆ 20 ಲಕ್ಷ ರೂ. ಆಸ್ಪತ್ರೆಗೆ ಖರ್ಚು ಮಾಡಿದ್ದಾರಂತೆ. ಒಂದು ವೇಳೆ ಕಿಡ್ನಿ ದಾನಿಗಳು ಸಿಕ್ಕರೇ, ಅದರ ಹಣವನ್ನೂ ಭರಿಸಲು ಸಿದ್ಧರಾಗಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ