ನಟಿ ನಯನತಾರಾ ವಿಚಾರಕ್ಕೆ ಬರುವುದಾದರೆ ರೂ.10 ಲಕ್ಷಗಳಿಂದ ಆರಂಭವಾದ ಅವರ ಸಂಭಾವನೆ ಈಗ ಕೋಟಿಗಳಲ್ಲಿದೆ. ಮೊನ್ನೆಯವರೆಗೂ ರೂ.3 ಕೋಟಿ ತೆಗೆದುಕೊಳ್ಳುತ್ತಿದ್ದ ಈ ತಾರೆ ಈಗ ನಾಲ್ಕು ಕೋಟಿ ಎನ್ನುತ್ತಿದ್ದಾರಂತೆ. ಇದು ಹೀರೋಗಳ ಜೊತೆ ನಟಸಲು ನಯನಿ ಕೇಳುತ್ತಿರುವ ಅಮೌಂಟು.
ಇನ್ನು ಹೀರೋಯಿನ್ ಓರಿಯಂಟ್ ಚಿತ್ರಗಳಾದರೆ ಇನ್ನೊಂದು ರೇಟು. ಇತ್ತೀಚೆಗೆ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದರು. ಅದಾದ ಮೇಲೆ ಒಳ್ಳೇ ಆಫರ್‌ಗಳು ಬರುತ್ತಿವೆಯಂತೆ. ಇವೆಲ್ಲಾ ಹೀರೋಯಿನ್ ಓರಿಯಂಟೆಡ್ ಸಿನಿಮಾಗಳು. ಒಂದೊಂದು ಚಿತ್ರಕ್ಕೆ ನಯನಿ ರೂ. 7 ಕೋಟಿ ಬೇಡಿಕೆ ಇಟ್ಟಿದ್ದಾರಂತೆ. ಆದರೆ ಇದು ಅತಿಯಾಯ್ತು ಅನ್ನೋ ಮಾತುಗಳೂ ನಯನಿ ಬಗ್ಗೆ ಕೇಳಿಬಂದಿವೆ.
ಪ್ರೇಕ್ಷಕರು ಸಿನಿಮಾಗಳನ್ನು ನೋಡಲು ಥಿಯೇಟರ್‌ಗಳಿಗೆ ಬರುತ್ತಿಲ್ಲ. ಚಿತ್ರಗಳಿಕೆ ಕಲೆಕ್ಷನ್ ಇಲ್ಲ. ಥಿಯೇಟರ್‌ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಇದೆ. ಇನ್ನೊಂದು ಕಡೆ ಚಿತ್ರಗಳನ್ನು ವಿತರಿಸಲು ವಿತರಕು ಸಿಗುತ್ತಿಲ್ಲ. ವ್ಯಾಪಾರ ಡಲ್.
ಸುಮಾರು 400 ಚಿತ್ರಗಳು ಸೆನ್ಸಾರ್ ಮುಗಿಸಿಕೊಂಡು ಬಿಡುಗಡೆಗಾಗಿ ಹರಸಾಹಸಪಡುತ್ತಿವೆ. ಚಿತ್ರೋದ್ಯಮ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ. ಇದನ್ನೆಲ್ಲಾ ಚಿತ್ರೋದ್ಯಮ ಮಂದಿ ಹೇಳುತ್ತಿದ್ದಾರೆ. ಇದು ಹೀಗಿದ್ದರೆ, ಸಿನಿಮಾ ತಾರೆಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಸಿನಿಮಾ ಸಿನಿಮಾದಿಂದ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.