ಆಗಾಗ ಬಿಕಿನಿಯಲ್ಲಿ ತಮ್ಮ ಸೌಂದರ್ಯವನ್ನ ತೆರೆದಿಡುವ ಪ್ರಯತ್ನ ಮಾಡುತ್ತಾ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ದಿಶಾ. ಇದೀಗ ಸಾಗರಕನ್ಯೆಯಾಗಿ ಇನ್ನೊಂದು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. "ಈ ಮೂಡ್ನಲ್ಲಿ ವಿಟಮಿನ್ ಸಿ ಬೇಕು" ಅಂತೇಳಿ ಬಿಕಿನಿ ಫೋಟೋವೊಂದನ್ನ ತೇಲಿಬಿಟ್ಟಿದ್ದಾರೆ.
ಕೇವಲ ಸೌಂದರ್ಯ ಅಷ್ಟೇ ಅಲ್ಲ, ಮಾತಿನಲ್ಲೂ ಒಂದಷ್ಟು ಚೂಟಿ ಈ ಬೆಡಗಿ ಅನ್ನೋದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ.
ಪುರಿ ಜಗನ್ನಾಥ್ ನಿರ್ದೇಶನದ ಟಾಲಿವುಡ್ನ ಲೋಫರ್ ಚಿತ್ರದಲ್ಲಿ ಬಣ್ಣದ ಹಚ್ಚುವ ಮೂಲಕ ಈ ಬೆಡಗಿ ದಕ್ಷಿಣ ಚಿತ್ರರಂಗಕ್ಕೆ ಅಡಿಯಿಟ್ಟಿದ್ದರು. ಆಮೇಲೆ ದಕ್ಷಿಣದಲ್ಲಿ ಅವಕಾಶಗಳಿಲ್ಲದೆ ಈಗ ಬಾಲಿವುಡ್ ಬಾಗಿಲು ತಟ್ಟಿದ್ದಾರೆ. ಅಲ್ಲೂ ಒಂದಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾಯ್ತು.
ಬಾಲಿವುಡ್ನ ಬೆಫಿಕ್ರಾ ಚಿತ್ರದಲ್ಲಿ ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್ ಜೊತೆ ಅಭಿನಯಿಸಿದ ಮೇಲೆ ಇವರಿಬ್ಬರ ಬಗ್ಗೆ ಗುಸುಗುಸು ಸುದ್ದಿಗಳು ಕೇಳಿಬಂದಿದ್ದವು. ಆದರೆ ಈ ಬೆಡಗಿ ಮಾತ್ರ ಯಾವುದಕ್ಕೂ ಕ್ಯಾರೆ ಅನ್ನಲಿಲ್ಲ.
ಬೀಚಲ್ಲಿ ಬಿಕಿನಿ ತೊಟ್ಟು ಈಜುತ್ತಿರುವ ಫೋಟೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಆದರೆ ಆ ಫೋಟೋದಲ್ಲಿ ಅವರ ಮುಖ ಮಾತ್ರ ಕಾಣಿಸುತ್ತಿಲ್ಲ. ಮುಖ ಕಾಣದಿದ್ದರೆ ಏನಂತೆ ಉಳಿದೆಲ್ಲಾ ಸೌಂದರ್ಯ ಅನಾವರಣ ಆಗಿದೆಯಲ್ಲಾ ಅಂತ ಅಭಿಮಾನಿಗಳು ಕಣ್ಕಣ್ ಬಿಡ್ತಿದ್ದಾರೆ.
ನೀಲಿ ಬಣ್ಣದ ಟೂ ಪೀಸ್ ಬಿಕಿನಿಯಲ್ಲಿ ನೀರಿನಲ್ಲಿ ಮೀನಿನಂತೆ ಈಜುತ್ತಿರುವ ದಿಶಾ ತಮ್ಮ ದೇಹಸಿರಿಯನ್ನ ಅಭಿಮಾನಿಗಳಿಗೆ ತೆರೆದಿಟ್ಟಿದ್ದಾರೆ. ಅವರು ಹಾಲಿವುಡ್ಗೆ ಹೋಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ ಅಂತ ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.