ಮುಂಬೈ : ಈ ಹಿಂದೆ ರಣವೀರ್ ಸಿಂಗ್ ಅವರು ನಟಿಸುತ್ತಿರುವ ‘ಸಿಂಬಾ’ ಚಿತ್ರದಲ್ಲಿ ಮಲಯಾಳಿ ನಟಿ ಪ್ರಿಯಾ ವಾರಿಯರ್ ಅವರು ನಟಿಸಲಿದ್ದಾರೆ ಎಂದು ಸುದ್ದಿಯಾಗಿದ್ದು, ಇದೀಗ ಅವರನ್ನು ಬಿಟ್ಟು ಬಾಲಿವುಡ್ ನ ಸ್ಟಾರ್ ನಟರೊಬ್ಬರ ಪುತ್ರಿಯನ್ನು ಆಯ್ಕೆಮಾಡಲಾಗಿದೆ.
ಕರಣ್ ಜೋಹರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಸಿಂಬಾ’ ಚಿತ್ರಕ್ಕೆ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಪುತ್ರಿ ಸಾರಾ ಅಲಿಖಾನ್ ಅವರು ಆಯ್ಕೆಯಾಗಿದ್ದು, ಈ ಬಗ್ಗೆ ಸ್ವತಃ ಕರಣ್ ಜೋಹರ್ ಅವರೇ ತಮ್ಮ ಟ್ವೀಟರ್ ನಲ್ಲಿ ಇದೇ ತಿಂಗಳು ಈ ಚಿತ್ರ ಸೆಟ್ಟೇರಲಿದ್ದು, 28 ಡಿಸೆಂಬರ್ 2018 ರಂದು ಬಿಡುಗಡೆಯಾಗಲಿದೆ. ಸಾರಾ ಈ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ.
ಸಾರಾ ಅಲಿಖಾನ್ ಅವರು ‘ಕೇದಾರನಾಥ್’ ಚಿತ್ರದ ಮೂಲಕ ಈಗಾಗಲೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, ಅದರ ಶೂಟಿಂಗ್ ಮುಗಿಯುವ ಮೊದಲೇ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ