ಮುಂಬೈ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಆಗಾಗ ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಹಿಂದೊಮ್ಮೆ ಭಾರತ ಮಹಿಳಾ ಕ್ರಿಕೆಟ್ ತಂಡ ಅಂಗಿ ಬಿಚ್ಚಿ ವಿಜಯೋತ್ಸವ ಆಚರಿಸುತ್ತಾರೆಯೇ ಎಂದು ಕೇಳಿ ವಿವಾದಕ್ಕೀಡಾಗಿದ್ದರು.
ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ ಪೋರ್ನ್ ವಿಡಿಯೋ ಪ್ರಕಟಿಸಿ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಎನ್ ಜಿಒ ಸಂಸ್ಥೆಯೊಂದು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಿಸಲು ಮನವಿ ಮಾಡಿದೆ.
ಪೋಸ್ಕೋ ಖಾಯಿದೆಯಡಿ ಕೇಸು ದಾಖಲಿಸುವಂತೆ ಜೈ ಹೋ ಫೌಂಡೇಷನ್ ಎಂಬ ಸ್ವಯಂ ಸೇವಾ ಸಂಘ ಬಾಂದ್ರಾ ಕುರ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ರಣಬೀರ್ ಕಪೂರ್ ತಂದೆ ಹಾಗೂ ಹಿರಿಯ ನಟ ರಿಷಿ ಕಪೂರ್ ಒಬ್ಬ ಹುಡುಗ ಮತ್ತು ಹುಡುಗಿಯ ಅಶ್ಲೀಲ ವಿಡಿಯೋ ಪ್ರಕಟಿಸಿದ್ದರು.