ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಎಲ್ಲೇ ಹೋದರೂ ಕ್ಯಾಮರಾ ಕಣ್ಣುಗಳು ಅವರನ್ನೇ ಹಿಂಬಾಲಿಸುತ್ತವೆ. ಆದರೆ ಇದೀಗ ಫೋಟೋಗ್ರಾಫರ್ ಒಬ್ಬರ ವಿರುದ್ಧ ಅನುಷ್ಕಾ ಶರ್ಮಾ ಕೆಂಡ ಕಾರಿದ್ದಾರೆ.
ಕಾರಣ, ಪತಿ ವಿರಾಟ್ ಕೊಹ್ಲಿ ಜೊತೆಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ಖಾಸಗಿ ಸಮಯ ಕಳೆಯುತ್ತಿದ್ದಾಗ ಫೋಟೋಗ್ರಾಫರ್ ಒಬ್ಬರು ಇವರ ಫೋಟೋ ಸೆರೆಹಿಡಿದಿದ್ದಾರೆ. ಈ ಫೋಟೋ ಎಲ್ಲೂ ಪ್ರಕಟಿಸಬೇಡಿ ಎಂದು ಮನವಿ ಮಾಡಿಕೊಂಡರೂ ಕಿವಿಯೇ ಕೊಡದೆ ಆತ ಮಾಧ್ಯಮಗಳಲ್ಲಿ ಪ್ರಕಟಿಸಿದ್ದು, ಅನುಷ್ಕಾ ಆಕ್ರೋಶಕ್ಕೆ ಕಾರಣವಾಗಿದೆ. ಎಷ್ಟೇ ಮನವಿ ಮಾಡಿದರೂ ಈ ಫೋಟೋಗ್ರಾಫರ್ ನಮ್ಮ ಖಾಸಗಿತನವನ್ನು ಗೌರವಿಸಿಲ್ಲ. ಇಂತಹದ್ದನ್ನೆಲ್ಲಾ ಇನ್ನು ಸಹಿಸಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.