ಮುಂಬೈ : ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದಿಕಿ ಅವರು ಜೊತೆಯಾಗಿ ನಟಿಸಿದ ಸೇಕ್ರೆಡ್ ಗೇಮ್ಸ್ ಸೀರಿಸ್ ನಲ್ಲಿ ನಟಿಯೊಬ್ಬರನ್ನು ಶೂಟಿಂಗ್ ಗಾಗಿ 7 ಬಾರಿ ನಗ್ನಗೊಳಿಸಿದ್ದಾರಂತೆ.
ಹೌದು. ಈ ಚಿತ್ರದಲ್ಲಿ ಮಂಗಳಮುಖಿ ಪಾತ್ರ ಮಾಡಿರುವ ಕುಬ್ರಾ ಸೈಟ್ ಅವರನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಅವರು 7ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರಂತೆ. ಈ ವಿಚಾರವನ್ನು ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪ್ರತಿ ಬಾರಿಯೂ ಕುಬ್ರಾ ಬಳಿ ಬರ್ತಿದ್ದ ಅನುರಾಗ್, ಇದು ಚೆನ್ನಾಗಿ ಬರಲಿಲ್ಲ. ಸಾರಿ, ಇನ್ನೊಮ್ಮೆ ಮಾಡಿ ಎನ್ನುತ್ತಿದ್ದರಂತೆ. ದೃಶ್ಯದ ಶೂಟಿಂಗ್ ಮಾಡೋದು ಸುಲಭವಾಗಿರಲಿಲ್ಲ. ಪದೇ ಪದೇ ಚಿತ್ರೀಕರಣ ನಡೆಯುತ್ತಿದೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡ ಎಂದು ಅನುರಾಗ್ ಹೇಳುತ್ತಿದ್ದರಂತೆ. ಅಲ್ಲದೇ ಚಿತ್ರದ ಶೂಟಿಂಗ್ ಬಳಿಕ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ನಟಿಯ ಬಳಿ ಕ್ಷಮೆ ಕೋರಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ