Webdunia - Bharat's app for daily news and videos

Install App

ಗರ್ಭಿಣಿ ದೀಪಿಕಾ ಪಡುಕೋಣೆ ಕೈ ಹಿಡಿಯಲು ಅಮಿತಾಭ್ ಬಚ್ಚನ್, ಪ್ರಭಾಸ್ ನಡುವೆ ಪೈಪೋಟಿ

Krishnaveni K
ಗುರುವಾರ, 20 ಜೂನ್ 2024 (12:06 IST)
Photo Credit: Facebook
ಮುಂಬೈ: ಕಲ್ಕಿ ಸಿನಿಮಾ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ಪಡುಕೋಣೆಗೆ ಸಹಾಯ ಮಾಡಲು ಅಮಿತಾಭ್ ಬಚ್ಚನ್ ಮತ್ತು ಪ್ರಭಾಸ್ ನಡುವೆ ಪೈಪೋಟಿಯೇ ಏರ್ಪಟ್ಟಿತ್ತು. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾಗ್ ಅಶ್ವಿನ್ ಅವರ ಬಹುನಿರೀಕ್ಷಿತ ಕಲ್ಕಿ 2898 ಎಡಿ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಶ್ರುತಿ ಹಾಸನ್ ಮುಂತಾದ ಘಟಾನುಘಟಿ ತಾರೆಯರು ಅಭಿನಯಿಸಿದ್ದಾರೆ. ಬುಧವಾರ ಸಂಜೆ ಮುಂಬೈನಲ್ಲಿ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಚಿತ್ರದ ಪ್ರಮುಖ ಪಾತ್ರದಾರಿಗಳೆಲ್ಲರೂ ಅಲ್ಲಿದ್ದರು. ಎಲ್ಲರಿಗೂ ಗೊತ್ತಿರುವ ಹಾಗೆ ದೀಪಿಕಾ ಪಡುಕೋಣೆ ಈಗ ತುಂಬು ಗರ್ಭಿಣಿ. ಕಬ್ಬು ಬಣ್ಣದ ಸೂಟ್ ನಲ್ಲಿ ದೀಪಿಕಾ ಬೇಬಿ ಬಂಪ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕಾರ್ಯಕ್ರಮಕ್ಕೆ ಬಂದ ದೀಪಿಕಾ ಮೊದಲು ವೇದಿಕೆಯ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು. ಬಳಿಕ ಅವರನ್ನು ವೇದಿಕೆಗೆ ಕರೆಯಲಾಯಿತು.

ಉಬ್ಬು ಹೊಟ್ಟೆ ಹೊತ್ತುಕೊಂಡು ದೀಪಿಕಾ ಎದ್ದೇಳಲು ಕಷ್ಟಪಟ್ಟರು. ಈ ವೇಳೆ ವೇದಿಕೆಯಲ್ಲಿದ್ದ ಅಮಿತಾಭ್ ಬಚ್ಚನ್ ಮತ್ತು ಪ್ರಭಾಸ್ ಓಡೋಡಿ ಬಂದು ದೀಪಿಕಾ ಕೈ ಹಿಡಿದು ವೇದಿಕೆಗೆ ಕರೆತಂದರು. ಬಳಿಕ ಪ್ರಭಾಸ್ ದೀಪಿಕಾಗೆ ವೇದಿಕೆ ಮೇಲಿನ ಆಸನದಲ್ಲಿ ಕೂರಲು ಹೇಳಿದರು. ಆದರೆ ನಿಂತೇ ಇದ್ದ ದೀಪಿಕಾ ಎಲ್ಲರೂ ಕೂತ ಮೇಲೆಯೇ ತಾವೂ ಕಷ್ಟಪಟ್ಟು ಕೂತರು.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ಕೊನೆಯವರಾಗಿ ದೀಪಿಕಾರನ್ನು ಮಾತನಾಡಿಸಿದ ಸಂದರ್ಶಕರು ಬಳಿಕ ಮೇಡಂ ಈಗ ನೀವು ನಿಮ್ಮ ಸೀಟ್ ಗೆ ಹೋಗಿ ಕೂರಬಹುದು ಎಂದು ವೇದಿಕೆಯಿಂದ ಕೆಳಗಿಳಿಯಲು ಸೂಚಿಸಿದರು. ಆ ವೇಳೆ ದೀಪಿಕಾ ಮೆಟ್ಟಿಲಿಳಿದು ಇಳಿಯಲು ಕಷ್ಟವಾಗುವುದು ಬೇಡವೆಂದು ಪ್ರಭಾಸ್ ತಕ್ಷಣವೇ ಎದ್ದು ನಿಂತು ದೀಪಿಕಾ ಕೈ ಹಿಡಿದುಕೊಳ್ಳಲು ಹೋದರು. ಪ್ರಭಾಸ್ ಹೋಗುವುದನ್ನು ನೋಡಿ ಹಿಂದೆಯೇ ಬಂದ ಅಮಿತಾಭ್ ಹಿಂದಿನಿಂದ ಪ್ರಭಾಸ್ ಗೆ ಹೊಡೆದು ದೀಪಿಕಾ ಕೈ ಹಿಡಿಯಲು ಪೈಪೋಟಿ ನಡೆಸಿದರು. ಇವರಿಬ್ಬರ ಈ ತಮಾಷೆಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ಗಾಯಕ ಸೋನು ನಿಗಮ್‌ಗೆ ಬಿಗ್‌ ರಿಲೀಫ್‌, ಹೈಕೋರ್ಟ್‌ ಹೇಳಿದ್ದೇನು ನೋಡಿ

Jr NTR: ಎನ್‌ಟಿಆರ್‌ಗೆ ಅರಸಿ ಬಂದ ಬಿಗ್ ಬಾಲಿವುಡ್ ಆಫರ್‌, ಇಲ್ಲಿದೆ ಅಪ್ಡೇಟ್ಸ್‌

Chaitra Kundapur: ಎರಡು ಕ್ವಾರ್ಟರ್ ಕೊಟ್ರೆ ದೇವರು ಅನ್ನುವವರು ನನ್ನ ತಂದೆ: ಚೈತ್ರಾ ಕುಂದಾಪುರ

Chaitra Kundapura: ಚೈತ್ರಾ ಕುಂದಾಪುರ ಓರ್ವ ಕಳ್ಳಿ, ಅವಳ ಗಂಡನೂ ಅಷ್ಟೇ: ತಂದೆಯಿಂದ ಗಂಭೀರ ಆರೋಪ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

ಮುಂದಿನ ಸುದ್ದಿ
Show comments