Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಕರೀನಾ ಕಪೂರ್

ಎರಡನೇ ಮಗುವಿನ ನಿರೀಕ್ಷೆಯಲ್ಲಿ  ನಟಿ ಕರೀನಾ ಕಪೂರ್
ಮುಂಬೈ , ಗುರುವಾರ, 13 ಸೆಪ್ಟಂಬರ್ 2018 (06:34 IST)
ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಇದೀಗ ಎರಡನೇ ಮಗುವಿಗೆ ತಾಯಿಯಾಗುವ ನಿರ್ಧಾರ ಮಾಡಿದ್ದಾರಂತೆ. ಈ ವಿಚಾರವನ್ನು ಖುದ್ದು ಕರೀನಾ ಕಪೂರ್ ಹೇಳಿದ್ದಾರೆ.


ನಟಿ ಕರೀನಾ ಕಪೂರ್, ನಟ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿ ಮುದ್ದಾದ ಗಂಡುಮಗುವಿನ ತಾಯಿಯಾದ ನಂತರ ಸಿನಿಮಾ ರಂಗದಿಂದ ದೂರ ಸರಿದರು. ಆಮೇಲೆ  ಇದೀಗ 'ವೀರೆ ದಿ ವೆಡ್ಡಿಂಗ್' ಚಿತ್ರದ ಮೂಲಕ ಮತ್ತೆ ವಾಪಾಸಾದ ಕರೀನಾ ಈಗ ಮತ್ತೆ ಎರಡನೇ ಮಗುವನ್ನು ಪಡೆಯುವ ಆಲೋಚನೆಯಲ್ಲಿದ್ದಾರಂತೆ.


ಇತ್ತೀಚಿಗೆ ಸ್ನೇಹಿತೆ ಅಮೃತಾ ಅರೋರಾ ಜೊತೆ ಕೋಮಲ್ ನಹಾತಾ ಶೋ 'ಸ್ಟೇರಿ ನೈಟ್ಸ್' 2 ಕಾರ್ಯಕ್ರಮಕ್ಕೆ ಬಂದಿದ್ದ ಕರೀನಾ ಕಪೂರ್, ‘ನಾನು ಹಾಗೂ ಸೈಫ್ ಎರಡನೇ ಮಗುವಿನ ಪ್ಲಾನ್ ಮಾಡ್ತಿದ್ದೇವೆ. ಆದರೆ ಎರಡು ವರ್ಷಗಳ ನಂತರ’ ಎಂದು ಕರೀನಾ ಹೇಳಿದ್ದಾಳೆ. ‘ಡಿಸೆಂಬರ್ 20,2016 ರಂದು ತೈಮೂರ್ ಜನಿಸಿದ್ದಾನೆ. ತೈಮೂರ್‌ ಅಲಿ ಖಾನ್‌ ಆಗಮನದ ಮೂಲಕ ಸೈಫ್ ಮೂರನೇ ಬಾರಿಗೆ ಅಪ್ಪನಾಗಿದ್ದಾರೆ.. ತೈಮೂರ್ ಎಲ್ಲಿ ಹೋದರೂ ಸುದ್ದಿಯಾಗುತ್ತಾನೆ. ತೈಮೂರ್ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ತೆಲುಗು ನಟಿಯ ಜೊತೆಗೆ ರೊಮ್ಯಾನ್ಸ್ ಮಾಡಿದ್ರು ಎಂದ ಶ್ರೀರೆಡ್ಡಿ