Webdunia - Bharat's app for daily news and videos

Install App

ಹೆಂಡತಿ, ಮಗಳ ಜೊತೆಗಿಲ್ಲದ ಮೇಲೆ ನೀವೆಂಥಾ ಗಂಡ: ಅಭಿಷೇಕ್ ಬಚ್ಚನ್ ಗೆ ನೆಟ್ಟಿಗರ ಕ್ಲಾಸ್

Krishnaveni K
ಭಾನುವಾರ, 14 ಜುಲೈ 2024 (13:57 IST)
ಮುಂಬೈ: ಅನಂತ್ ಅಂಬಾನಿ ಮದುವೆಯಲ್ಲಿ ಪತ್ನಿ, ಮಗಳನ್ನು ಬಿಟ್ಟು ತಂದೆ-ತಾಯಿ, ಪೋಷಕರೊಂದಿಗೆ ಫೋಟೋಗೆ ಪೋಸ್ ಕೊಟ್ಟ ಅಭಿಷೇಕ್ ಬಚ್ಚನ್ ಗೆ ನೆಟ್ಟಿಗರು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಅನಂತ್ ಅಂಬಾನಿ ಮದುವೆಯಲ್ಲಿ ಬಚ್ಚನ್ ಪರಿವಾರದ ಎಲ್ಲರೂ ಬಂದಿದ್ದರು. ಆದರೆ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಮಗಳು, ಅಳಿಯನ ಜೊತೆಗೆ ಅಭಿಷೇಕ್ ಬಚ್ಚನ್ ಫೋಟೋಗೆ ಪೋಸ್ ನೀಡಿದ್ದರು. ಅವರ ಜೊತೆಗೇ ಅಭಿಷೇಕ್ ಇದ್ದರು. ಇವರ ಬಳಿಕ ಐಶ್ವರ್ಯಾ ಮತ್ತು ಮಗಳು ಆರಾಧ್ಯ ಪ್ರತ್ಯೇಕವಾಗಿ ಬಂದು ಫೋಟೋಗೆ ಪೋಸ್ ನೀಡಿದ್ದರು.

ಹೀಗಾಗಿ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಾಹೀರಾಗಿತ್ತು. ಕೆಲವು ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ವಿಚ್ಛೇದನ ವದಂತಿ ಜೋರಾಗಿ ಸದ್ದು ಮಾಡಿತ್ತು. ಆದರೆ ಈಗ ಅನಂತ್ ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ಮತ್ತು ಮಗಳು ಕುಟುಂಬದಿಂದ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದು ಈ ವದಂತಿಗಳಿಗೆ ಪುಷ್ಠಿ ನೀಡಿದೆ.

ಪತ್ನಿ ಐಶ್ವರ್ಯಾ ಮತ್ತು ಮಗಳು ಆರಾಧ್ಯಳನ್ನು ಬಿಟ್ಟು ನಿಮ್ಮ ತಂದೆ-ತಾಯಿ ಜೊತೆಗೇ ಅಂಟಿಕೊಂಡಿದ್ದೀರಲ್ಲಾ? ಪತ್ನಿ, ಮಗಳನ್ನು ಏಕಾಂಗಿಯ ಬಿಟ್ಟ ನೀವೆಂಥಾ ಗಂಡ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ನಿಮಗೆ ಸೊಸೆ ಇಷ್ಟವಿಲ್ಲವೆಂದ ಮೇಲೆ ಮಗನಿಗೆ ಯಾಕೆ ಮದುವೆ ಮಾಡಿಸಿದಿರಿ. ಆಕೆಗೆ ಆಕೆಯದ್ದೇ ಕೆರಿಯರ್ ಇತ್ತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

ಮುಂದಿನ ಸುದ್ದಿ
Show comments