ಮುಂಬೈ: ಶೂಟಿಂಗ್ ವೇಳೆ ಕೈಗೆ ಗಾಯಮಾಡಿಕೊಂಡ ನಟ ಅಭಿಷೇಕ್ ಬಚ್ಚನ್ ರನ್ನು ನೋಡಲು ತಂದೆ, ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಸಹೋದರಿ ಶ್ವೇತಾ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಶೂಟಿಂಗ್ ವೇಳೆ ಅಭಿಷೇಕ್ ಕೈಗೆ ಗಾಯವಾಗಿದ್ದು, ಮುರಿತಕ್ಕೊಳಗಾಗಿದೆ. ಅವರನ್ನು ತಕ್ಷಣವೇ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದ ವಾರ ಪತ್ನಿ ಐಶ್ವರ್ಯಾ, ಪುತ್ರಿ ಆರಾಧ್ಯ ಜೊತೆಗೆ ಅಭಿಷೇಕ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆಯೇ ಅವರ ಕೈಯಲ್ಲಿ ಬ್ಯಾಂಡೇಜ್ ಇತ್ತು. ಹೀಗಾಗಿ ಆಗಲೇ ಅವರಿಗೆ ಗಾಯವಾಗಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ.