Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯಸಭೆ ಚುನಾವಣೆಗೆ ದಿನಾಂಕ ನಿಗದಿ

ರಾಜ್ಯಸಭೆ ಚುನಾವಣೆಗೆ ದಿನಾಂಕ ನಿಗದಿ
ನವದೆಹಲಿ , ಶನಿವಾರ, 24 ಫೆಬ್ರವರಿ 2018 (06:54 IST)
ನವದೆಹಲಿ: ರಾಜ್ಯಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 23ರಂದು ಕರ್ನಾಟಕ ಸೇರಿ 16 ರಾಜ್ಯಗಳ 58 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ರಾಜ್ಯದ ನಾಲ್ಕು ಸದಸ್ಯರು ಏಪ್ರಿಲ್ 4ರಂದು ನಿವೃತ್ತಿಗೊಳ್ಳಲಿದ್ದು, ರೆಹಮಾನ್ ಖಾನ್, ರಾಜೀವ್ ಚಂದ್ರಶೇಖರ್, ರಾಮಕೃಷ್ಣ,ಬಸವರಾಜ್ ಪಾಟೀಲ್ ಅವರ ಸದಸ್ಯತ್ವದ ಅವಧಿ ಏಪ್ರಿಲ್ ಗೆ ಮುಕ್ತಾಯವಾಗಲಿದೆ. ಮಾ.5ಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು ಮಾ.12  ನಾಮಪತ್ರ ಸಲ್ಲಿಸೊಕ್ಕೆ ಅಭ್ಯರ್ಥಿಗಳಿಗೆ ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಷ್ಕರಣೆ ಪ್ರಕ್ರಿಯೆಯು ಮಾರ್ಚ್ 13ರಂದು ನಡೆಯಲಿದ್ದು, ಮಾರ್ಚ್ 15 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮತದಾನ ಮಾರ್ಚ್ 23ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂಬ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೈಲು ನಿಲ್ದಾಣದಲ್ಲಿ ಎಲ್ಲರ ಎದುರೇ ಬಲವಂತವಾಗಿ ಮುತ್ತಿಟ್ಟ