ಬೆಂಗಳೂರು: ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿರಲಿ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ನಮ್ಮ ಪದ್ಧತಿ. ಯಾವುದೇ ಹೊಸ ಕೆಲಸಕ್ಕಾದರೂ ಸರಿಯೇ ಪಾದ ಮುಟ್ಟಿ ನಮಸ್ಕರಿಸುವುದರ ಹಿಂದೆ ಒಳ್ಳೆಯ ಉದ್ದೇಶವಿದೆ.
ಹಿರಿಯರು ನಮ್ಮ ತೀರ್ಥರೂಪರು, ದೈವ ಸಮಾನರು ಎಂಬುದು ನಮ್ಮ ನಂಬಿಕೆ. ಹಿರಿಯರಿಗೆ ಸಂಪೂರ್ಣ ಶರಣಾಗತಿಯಾಗಿದ್ದೇನೆ ಎಂಬರ್ಥದಲ್ಲಿ ಪಾದ ಮುಟ್ಟಿ ನಮಸ್ಕರಿಸಲಾಗುವುದು.
ಭಗವಂತನೇ ಆದರೂ, ಹಿರಿಯರೇ ಆದರೂ ಮೊದಲು ಪಾದ ಸ್ಪರ್ಶ ಮಾಡಬೇಕು ಎನ್ನುವುದು ನಮ್ಮ ಹಿರಿಯರು ಹೇಳಿಕೊಟ್ಟ ಪಾಠ. ನಾವು ಯಾರಿಗೆ ನಮಸ್ಕರಿಸುತ್ತೇವೋ ಅವರು ನಮ್ಮನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ.
ಭಗವಂತನ ಶಕ್ತಿಯು ಪಾದದ ಅಂಗುಷ್ಠದ ಮೂಲಕ ಸಂಚರಿಸುತ್ತಿರುತ್ತದೆ. ಹಾಗಾಗಿ ಪಾದ ಮುಟ್ಟಿ ನಮಸ್ಕರಿಸುವುದು ಶ್ರೇಷ್ಠ ಎಂದು ನಂಬಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ