ಬೆಂಗಳೂರು: ಗೃಹ ಪ್ರವೇಶದ ದಿನ ಅಥವಾ ಹೊಸ ಮನೆಗೆ ಪ್ರವೇಶ ಮಾಡಿದ ಮೇಲೆ ಮೊದಲು ನಾವು ಮಾಡುವ ಕೆಲಸ ಹಾಲು ಉಕ್ಕಿಸುವುದು. ಅದು ಯಾಕೆ ಎನ್ನುವುದಕ್ಕೆ ಧಾರ್ಮಿಕ ಹಿನ್ನಲೆ ಇದೆ.
ಹಾಲು ಉಕ್ಕಿ ಬಂದು ಚೆಲ್ಲಬೇಕು ಎನ್ನಲಾಗುತ್ತದೆ. ಹಾಲು ಚೆಲ್ಲಿದ ರೀತಿಯಲ್ಲಿ ಮನೆಯಲ್ಲಿ ಧನ, ಧಾನ್ಯ ಸಂಪತ್ತು, ವಿದ್ಯೆ ಎಲ್ಲವೂ ಉಕ್ಕಿ ಬರಲಿ ಎಂಬುದು ಇದರ ಹಿಂದಿನ ಉದ್ದೇಶ.
ಇನ್ನು ಉಕ್ಕಿದ ಹಾಲು ಸುಮ್ಮನೇ ಚೆಲ್ಲಿದರೂ ಸಾಲದು. ಉಕ್ಕಿದ ಹಾಲು ಒಲೆಯಲ್ಲಿನ ಬೆಂಕಿ ನಂದಿಸಬೇಕು. ಬೆಂಕಿ ಮನೆಯಲ್ಲಿರುವ ಕಷ್ಟ ಕಾರ್ಪಣ್ಯಗಳ ಸಂಕೇತ. ಬೆಂಕಿ ನಂದಿದ ಹಾಗೇ ಮನೆಯ ಕಷ್ಟ-ನಷ್ಟಗಳು ದೂರವಾಗಲಿ ಎಂಬುದು ಇದರ ಹಿಂದಿರುವ ಸದಾಶಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ