ಬೆಂಗಳೂರು: ಉಪವಾಸ ವ್ರತ ಎಂದರೆ ಸಂಪೂರ್ಣ ನಿರಾಹಾರ ಇರಬೇಕೆಂದೇನಿಲ್ಲ. ವ್ರತ ಇರುವಾಗ ಕೆಲವು ಆಹಾರಗಳನ್ನು ಸೇವಿಸಬಹುದು. ಅವು ಯಾವುವೆಲ್ಲಾ ಎನ್ನುವುದನ್ನು ನೋಡೋಣ.
ಬೇಳೆ ಕಾಳುಗಳು
ಧಾನ್ಯಗಳನ್ನು ಸೇವಿಸುವುದಕ್ಕೆ ವ್ರತ ಅಡ್ಡಬಾರದು. ಕಡಲೆ ಉಸುಲಿ, ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ವ್ರತವೂ ತಪ್ಪದು.
ಬಾಳೆ ಹಣ್ಣು
ಬಾಳೆ ಹಣ್ಣು ಪೌಷ್ಠಿಕ ಆಹಾರ. ಇದು ನಿಷಿದ್ಧ ಆಹಾರವಲ್ಲ. ಹಾಗಾಗಿ ಉಪವಾಸ ವ್ರತ ಇರುವಾಗ ತೀವ್ರ ಬಳಲಿಕೆಯಿಂದ ಮುಕ್ತಿ ಪಡೆಯುವುದಕ್ಕೆ ಇದು ಹೇಳಿ ಮಾಡಿಸಿದ ಹಣ್ಣು.
ತೆಂಗಿನ ಕಾಯಿ
ತೆಂಗಿನಕಾಯಿಯಿಂದ ತಯಾರಿಸಿದ ಉತ್ಪನ್ನಗಳು, ಅದರ ಹಾಲು, ಪಾಯಸ ಸೇವಿಸಲು ಹಿಂದೆ ಮುಂದೆ ನೋಡಬೇಕಾಗಿಲ್ಲ
ಹಾಲು ಮತ್ತು ಹಾಲಿನ ಉತ್ಪನ್ನಗಳು
ಹಾಲು ಹೊಟ್ಟೆಗೂ ತಂಪು, ಶಕ್ತಿ ವರ್ಧಕ ಕೂಡಾ. ಹಾಗಾಗಿ ಉಪವಾಸ ವ್ರತ ಮಾಡುವಾಗ ನಿಶ್ಯಕ್ತಿಯಾಗದಂತೆ ತಡೆಯಲು ಹಾಲಿನ ಉತ್ಪನ್ನಗಳನ್ನು ಸೇವಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ