Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಿವರಾತ್ರಿಗೆ ಯಾವ ದೇವಾಲಯಕ್ಕೆ ಭೇಟಿ ನೀಡಬಹುದು?

ಶಿವರಾತ್ರಿಗೆ ಯಾವ ದೇವಾಲಯಕ್ಕೆ ಭೇಟಿ ನೀಡಬಹುದು?
ಬೆಂಗಳೂರು , ಮಂಗಳವಾರ, 13 ಫೆಬ್ರವರಿ 2018 (05:03 IST)
ಬೆಂಗಳೂರು: ಇಂದು ದೇಶದಾದ್ಯಂತ ಶಿವಭಕ್ತರೆಲ್ಲಾ ಶಿವರಾತ್ರಿ ಆಚರಿಸುತ್ತಿರುತ್ತಾರೆ. ಬೆಂಗಳೂರಿನ ನಗರದಲ್ಲೇ ಹಲವಾರು ಶಿವ ದೇಗುಲಗಳಿವೆ. ಅದಕ್ಕೊಂದು ಸುತ್ತು ಹಾಕೋಣ.
 

ಗವಿಗಂಗಾಧರೇಶ್ವರ
ಅತ್ಯಂತ ಪುರಾತನ ದೇವಾಲಯವಾದ ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಆಚರಿಸಬಹುದು. ಪ್ರತಿ ಸಂಕ್ರಮಣದ ದಿನ ಇಲ್ಲಿ ಶಿವನಿಗೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ.

ಏರ್ ಪೋರ್ಟ್ ರಸ್ತೆಯ ಶಿವ ದೇಗುಲ
ತೀರಾ ಇತ್ತೀಚೆಗೆ ಸ್ಥಾಪನೆಯಾಗಿರುವ ಈ ಶಿವದೇವಾಲಯದಲ್ಲಿ ಅತ್ಯಂತ ಎತ್ತರದ ಶಿವನ ಮೂರ್ತಿ ಆಕರ್ಷಣೆಯ ಕೇಂದ್ರಬಿಂದು.

ಕಾಡು ಮಲ್ಲೇಶ್ವರ
ಮಲ್ಲೇಶ್ವರದಲ್ಲಿರುವ ದೇವಾಲಯಗಳ ಬೀದಿಯಲ್ಲಿ ಈ ದೇವಾಲಯಕ್ಕೆ ಭೇಟಿ ಕೊಡದೇ ಇರಲು ಸಾಧ್ಯವಿಲ್ಲ. ಅತ್ಯಂತ ಪುರಾತನವಾದ ಈ ದೇವಾಲಯಕ್ಕೆ ಭೇಟಿ ಕೊಟ್ಟರೆ ಭಕ್ತಿ ಪರವಶರಾಗುತ್ತೀರಿ.

ಹಲಸೂರು
ಹಲಸೂರು ಪೊಲೀಸ್ ಠಾಣೆಯ ಬಳಿ ಸ್ವಲ್ಪ ಬಲಕ್ಕೆ ತಿರುಗಿದರೆ ಪುರಾತನವಾದ ಶಿವ ದೇಗುಲವಿದೆ. ವಿಶಾಲವಾದ ಈ ದೇವಾಲಯ ನಗರದ ಮಧ್ಯೆ ಇದ್ದರೂ ಪ್ರಶಾಂತವಾಗಿದೆ.

ಬಸವನಗುಡಿ
ಎಪಿಸಿ ಮೈದಾನದ ಹತ್ತಿರ ಹಳೆಯ ಕಾಲದ ಶಿವ ದೇಗುಲವೊಂದಿದೆ. ಎನ್ ಆರ್ ಕಾಲೊನಿ ಬಳಿಯ ಈ ದೇಗುಲಕ್ಕೆ ಒಮ್ಮೆ ಭೇಟಿ ಕೊಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯಿಂದ ಪೂಜಿಸಿದರೆ ಈ ಲಾಭ ಗ್ಯಾರಂಟಿ