Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

Maharshi Valmiki

Krishnaveni K

ಬೆಂಗಳೂರು , ಗುರುವಾರ, 17 ಅಕ್ಟೋಬರ್ 2024 (09:42 IST)
Photo Credit: X
ಬೆಂಗಳೂರು: ಇಂದು ದೇಶದಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತಿದೆ. ವಾಲ್ಮೀಕಿ ಜಯಂತಿ ನಿಮಿತ್ತ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸರ್ಕಾರೀ ರಜೆಯೂ ಇದೆ. ಆದರೆ ಮಹರ್ಷಿ ವಾಲ್ಮೀಕಿ ಕತೆ ಕೆಲವರಿಗೆ ಗೊತ್ತಿರುವುದಿಲ್ಲ. ಅದನ್ನು ಹೇಳುವ ಪ್ರಯತ್ನ ಇಲ್ಲಿ ಮಾಡಿದ್ದೇವೆ.

ರಾಮಾಯಣ ಎಂಬ ಹಿಂದೂಗಳ ಪವಿತ್ರ ಗ್ರಂಥವನ್ನು ರಚಿಸಿದವರು ವಾಲ್ಮೀಕಿ ಮಹರ್ಷಿಗಳು. ಆದರೆ ಅವರು ಹುಟ್ಟಿನಿಂದಲೇ ಸಾಧ್ವಿಯಾಗಿರಲಿಲ್ಲ. ಮಹರ್ಷಿಯಾಗುವುದಕ್ಕೆ ಮುನ್ನ ವಾಲ್ಮೀಕಿ ಮಹರ್ಷಿಗಳ ಮೂಲ ಹೆಸರು ರತ್ನಾಕರ ಎಂದಾಗಿತ್ತು. ಆತ ಒಬ್ಬ ಡಕಾಯಿತನಾಗಿದ್ದ. ಸಿಕ್ಕ ಸಿಕ್ಕವರನ್ನು ದರೋಡೆ ಮಾಡುವುದು, ಕೊಲೆ ಮಾಡುವುದು ಇತ್ಯಾದಿ ಪಾಪ ಕೃತ್ಯಗಳನ್ನು ಮಾಡುವುದೇ ಆತನ ಕಸುಬಾಗಿತ್ತು.

ಈತ ಮುಂದೆ ರಾಮಾಯಣವನ್ನು ಬರೆದ ಎಂದರೆ ಯಾರೂ ನಂಬಲು ಸಾಧ್ಯವೇ ಇಲ್ಲ. ಆದರೆ ಡಕಾಯಿತನಾಗಿದ್ದ ರತ್ನಾಕರನನ್ನು ಮಹರ್ಷಿಯಾಗಿ ಬದಲಾಯಿಸಿದ್ದು ನಾರದ ಮುನಿಗಳು. ಡಕಾಯಿತನಾಗಿದ್ದ ರತ್ನಾಕರನಿಗೆ ರಾಮ ನಾಮ ಜಪಿಸಲು ನಾರದ ಮುನಿಗಳೇ ಸಲಹೆ ನೀಡಿದರು.

ಆದರೆ ಆರಂಭದಲ್ಲಿ ರತ್ನಾಕರ ರಾಮ ಎನ್ನುವ ಶಬ್ಧವನ್ನು ‘ಮರಾ’ ಎಂದು ತಪ್ಪಾಗಿ ಉಚ್ಚರಿಸುತ್ತಿದ್ದ. ಆದರೆ ದಿನ ಕಳೆದಂತೆ ಆತನಲ್ಲಿ ಬದಲಾವಣೆ ಬಂತು. ಆತ ಸಂಪೂರ್ಣವಾಗಿ ಶುದ್ಧನಾದ ಎಂದು ಅನಿಸಿದ ಬಳಿಕ ಬ್ರಹ್ಮ ದೇವ ಆತನಿಗೆ ವಾಲ್ಮೀಕಿ ಎಂದು ನಾಮಕರಣ ಮಾಡುತ್ತಾರೆ.

ಸಂತೋಷವಾಗಿ ಕುಳಿತಿದ್ದ ಗಂಡು-ಹೆಣ್ಣು ಕ್ರೌಂಚ ಪಕ್ಷಿಗಳ ಪೈಕಿ ಗಂಡು ಹಕ್ಕಿಗೆ ಬೇಡನೊಬ್ಬನ ಬಾಣ ತಗುಲುತ್ತದೆ. ಆಗ ಹೆಣ್ಣು ಪಕ್ಷಿಯ ರೋಧನೆ ನೋಡಿದ ವಾಲ್ಮೀಕಿ ರಾಮಾಯಣದ ಮೊದಲ ಪದ್ಯವನ್ನು ರಚಿಸುತ್ತಾನೆ. ಬಳಿಕ ಬ್ರಹ್ಮ ದೇವನೇ ವಾಲ್ಮೀಕಿ ಮಹರ್ಷಿಗೆ ಇಡೀ ರಾಮಾಯಣ ಬರೆಯಲು ಸೂಚನೆ ಕೊಡುತ್ತಾನೆ. ಅದರಂತೆ ವಾಲ್ಮೀಕಿ ಇಡೀ ರಾಮಾಯಣದ ಕರ್ತೃವಾಗುತ್ತಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ