ಬೆಂಗಳೂರು: ಧನುರ್ಮಾಸದಲ್ಲಿ ಭಕ್ತಿಯಿಂದ ಶ್ರೀ ದೇವಿಯನ್ನು ಪೂಜೆ ಮಾಡುವುದರಿಂದ ನಾವು ಅಂದುಕೊಂಡ ಕಾರ್ಯಗಳು ನೆರವೇರಿ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ.
ಧರ್ನುಮಾಸದಲ್ಲಿ ದೇವಿ ಪೂಜೆ ಮಾಡುವುದು ಹೇಗೆ ಗೊತ್ತಾ? ಧನುರ್ಮಾಸದಲ್ಲಿ ಒಂದು ತಿಂಗಳ ಪರ್ಯಂತ ಅರುಣೋದಯ ಪೂರ್ವದಲ್ಲಿ ಎದ್ದು ಭಕ್ತಿಯಿಂದ ಹುಗ್ಗಿಯ ನೈವೇದ್ಯವನ್ನು ಮಾಡಿ ಅರ್ಪಿಸಿದಲ್ಲಿ ಸಹಸ್ರವರ್ಷದ ಪೂಜಾ ಫಲ ದೊರೆಯುತ್ತದೆ.
ಈ ಮಾಸದಲ್ಲಿ ಶ್ರೀ ದೇವಿಯ ಪ್ರೀತ್ಯರ್ಥವಾಗಿ ಬೆಳ್ತಿಗೆ ಅನ್ನ, ಹೆಸರು ಬೇಳೆ, ಕೊಬ್ಬರಿ, ತುಪ್ಪ ಸೇರಿಸಿ ಸವಿಯಾದ ಘೃತಾನ್ನ ಮಾಡಿ ದೇವಿಗೆ ನೈವೇದ್ಯ ಸಮರ್ಪಿಸಬೇಕು. ಈ ರೀತಿ ಮಾಡುವುದರಿಂದ ಶ್ರೀ ದೇವಿ ಪ್ರಸನ್ನಳಾಗಿ ನಾವು ಬೇಡಿದ ವರವ ಕರುಣಿಸುವಳು ಎಂಬುದು ನಂಬಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ