ಬೆಂಗಳೂರು: ದೇವಾಲಯಕ್ಕೆ ಹೋಗುವಾಗ ನಾವು ಹೇಗಿರಬೇಕು ಎಂಬುದಕ್ಕೆ ಕೆಲವು ಶಿಷ್ಟಾಚಾರಗಳಿವೆ. ಹಾಗಿದ್ದರೂ ದೇವಾಲಯದಲ್ಲಿ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅದು ಯಾವುವು ನೋಡೋಣ.
-
ಭಗವಂತನ ಮಂದಿರಕ್ಕೆ ಕೈ ಕಾಲು ತೊಳೆಯದೇ ಪ್ರವೇಶ ಮಾಡುವುದು.
-
ಸಾಕ್ಸ್ ಹಾಕಿಕೊಂಡು ಪ್ರವೇಶಿಸುವುದು
-
ಭಗವಂತನ ಮಂದಿರಕ್ಕೆ ಬೀಡಿ, ಸಿಗರೇಟು, ಮಾಂಸ, ಮಧ್ಯ ಸೇವಿಸಿ ಪ್ರವೇಶಿಸುವುದು.
-
ಚರ್ಮದ ಬೆಲ್ಟ್, ಚಪ್ಪಲಿ ಧರಿಸಿಕೊಂಡು ಹೋಗುವುದು.
-
ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.
-
ಕೊಳೆತ, ಕೆಟ್ಟ ಅಥವಾ ಒಣಗಿದ ಹೂ/ಹಣ್ಣುಗಳನ್ನು ಅರ್ಪಿಸುವುದು.
-
ದೇವಾಲಯದ ಹೊಸ್ತಿಲು, ಕಿಟಿಕಿಗಳಲ್ಲಿ ಕರ್ಪೂರ ಹಚ್ಚುವುದು.
-
ದೇವಾಲಯಕ್ಕೆ ಅರ್ಪಿಸಿದ ಸಾಮಗ್ರಿಗಗಳನ್ನು ಅಂಗಡಿಗಳಿಗೆ ಮಾಡಿ ಮತ್ತೆ ಅದೇ ಸಾಮಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.
-
ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದೇ ಇರುವುದು.
-
ಭಗವಂತನ ಸಮ್ಮುಖದಲ್ಲಿಯೇ ಪ್ರದಕ್ಷಿಣೆ ಮಾಡುವುದು, ನೆಲಕ್ಕೆ ಬಾಗಿ ನಮಸ್ಕರಿಸದೇ ಇರುವುದು.
-
ಕಾಲು ಚಾಚಿ ಕೂರುವುದು ಮತ್ತು ಕುರ್ಚಿ ಇನ್ನಿತರ ಆಸನಗಳಲ್ಲಿ ಕೂರುವುದು.
-
ಭಗವಂತನ ಸಮ್ಮುಖ ಭೋಜನ ಮಾಡುವುದು.
-
ದೇವಾಲಯದಲ್ಲಿ ಬೇರೆಯವರಿಗೆ ಕೆಡುಕು ಉಂಟುಮಾಡುವುದು, ಕೆಟ್ಟ ಮಾತನಾಡುವುದು.
-
ಭಗವಂತನ ಸಮ್ಮುಖ ಆಕಳಿಸುವುದು, ಅಧೋವಾಯುವನ್ನು ತ್ಯಜಿಸುವುದು.
-
ಭಗವಂತನ ವಿಗ್ರಹಕ್ಕೆ ಬೆನ್ನು ತೋರಿಸಿ ಕೂರುವುದು.
-
ದೇವಾಲಯದಲ್ಲಿ ಉಗುರು ಕಡಿಯುವುದು, ಕಣ್ಣು, ಕಿವಿ, ಮೂಗುಗಳಿಗೆ ಬೆರಳು ತೂರುವುದು.
-
ಪ್ರಸಾದ ರೂಪದಲ್ಲಿ ಸಿಕ್ಕ ವಸ್ತುಗಳನ್ನು ದೇವಾಲಯದಲ್ಲಿಯೇ ಭಿಕ್ಷೆ ನೀಡುವುದು.
ಇತ್ಯಾದಿಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುತ್ತಿರುತ್ತೇವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ಪ್ರವೇಶಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ