ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಫೇಸ್ ಪ್ಯಾಕ್ ಗಳು ದೊರೆಯುತ್ತವೆ. ಆ ಉತ್ಪನ್ನಗಳು ರಾಸಾಯನಿಕಗಳಿಂದ ಮುಕ್ತವಾಗಿರುತ್ತವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.ಅದರ ಬದಲಾಗಿ ನೈಸರ್ಗಿಕ ಹಣ್ಣಿನಿಂದ ತಯಾರಿಸಿದ ಅದ್ಭುತವಾದ ಫೇಸ್ ಪ್ಯಾಕ್ಗಳು ನಿಸ್ಸಂದೇಹವಾಗಿ ಬಳಸಬಹುದಾಗಿದೆ. ಇದರಿಂದಾಗಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಬದಲಾಗಿ ನಯವಾದ ಹಾಗು ಮೃದುವಾದ ಸೌಂದರ್ಯವನ್ನು ಪಡೆಯಬಹುದು.