ಬೆಂಗಳೂರು: ಪ್ರತಿಯೊಬ್ಬರಿಗೂ ಹೊಳೆಯುವ, ಕಾಂತಿಯುತ ಚರ್ಮ ನಮ್ಮದಾಗಬೇಕು ಎಂಬ ಆಸೆಯಿರುತ್ತದೆ. ಅದಕ್ಕಾಗಿ ಅನೇಕ ನ್ಯಾಚುರಲ್ ದಾರಿಗಳು ನಮ್ಮಲ್ಲೇ ಇದೆ.
ಪ್ರತಿನಿತ್ಯ ಹಾಲು ಸೇವಿಸುವುದರಿಂದ ನಮ್ಮ ಮೂಳೆಗಳು ಗಟ್ಟಿಯಾಗಿ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಅದೇ ರೀತಿ ಹಸಿ ಹಾಲು ನಮ್ಮ ಚರ್ಮಕ್ಕೆ ಎಷ್ಟು ಅದ್ಭುತ ಲಾಭ ತಂದುಕೊಡುತ್ತದೆ ಗೊತ್ತಾ?
ಹಾಲಿನ ಕೆನೆಯನ್ನು ಮುಖಕ್ಕೆ ಫೇಸ್ ಪ್ಯಾಕ್ ರೀತಿ ಹಚ್ಚಿಕೊಳ್ಳುತ್ತೇವೆ. ಅದೇ ರೀತಿ ಹಸಿ ಹಾಲನ್ನು ಬಳಸುವುದರಿಂದ ನಮ್ಮ ಚರ್ಮ ಮೃದುವಾಗುವುದಲ್ಲದೆ, ಕಾಂತಿಯುಕ್ತವಾಗುತ್ತದೆ. ಹಾಲಿನಲ್ಲಿರುವ ಕೊಬ್ಬಿನಂಶ, ಲ್ಯಾಕ್ಟಿಕ್ ಆಸಿಡ್ ಅಂಶದಿಂದ ನಮ್ಮ ಚರ್ಮ ಕಾಂತಿಯುತ ಮತ್ತು ತೇವಾಂಶ ಭರಿತವಾಗಿರುವಂತೆ ಮಾಡುತ್ತದೆ.