Webdunia - Bharat's app for daily news and videos

Install App

ಹಳದಿ ಗಟ್ಟಿದ ಉಗುರುಗಳನ್ನು ಬಿಳಿಯಾಗಿಸುವುದು ಹೇಗೆ ಗೊತ್ತಾ...?

Webdunia
ಸೋಮವಾರ, 29 ಜನವರಿ 2018 (07:20 IST)
ಬೆಂಗಳೂರು : ಉಗುರಿಗೆ ಹಚ್ಚುವ ಬಣ್ಣ ಹಾಗೂ ಇದನ್ನು ತೆಗೆಯಲು ಬಳಸುವ ನೇಲ್ ರಿಮೂವರ್‪ಗಳ ಅತಿಯಾದ ಬಳಕೆಯಿಂದ ಉಗುರಿನ ಬಣ್ಣ ಹಳದಿಯಾಗುತ್ತದೆ. ಹಳದಿ ಉಗುರುಗಳಿಂದ ಸಾವಿರಾರು ಮಹಿಳೆಯರು ಚಿಂತೆಗೊಳಗಾಗಿದ್ದು ಈ ಉಗುರುಗಳನ್ನು ಇತರರಿಗೆ ತೋರಿಸಿಕೊಳ್ಳಲು ಮುಜುಗರಕ್ಕೊಳಗಾಗುತ್ತಾರೆ ಹಾಗೂ ಇದನ್ನು ಮರೆಮಾಚಲು ಉಗುರಿಗೆ ಮತ್ತೆ ನೈಲ್ ಪಾಲಿಶ್ ಹಚ್ಚುತ್ತಾರೆ. ಆದ್ದರಿಂದ ಹಳದಿ ಉಗುರುಗಳನ್ನು ಮತ್ತೆ ಬಿಳಿಯಾಗಿಸಲು ಕೆಲವಾರು ಮನೆಮದ್ದುಗಳಿದ್ದು ಇವು ಸುರಕ್ಷಿತ ಹಾಗೂ ಬಳಸಲು ಸುಲಭವೂ ಆಗಿದೆ.

 
ಅಡುಗೆ ಸೋಡಾ : ಅಡುಗೆ ಸೋಡಾ ಸತ್ತ ಜೀವಕೋಶಗಳನ್ನು ನಿವಾರಿಸಲು ಅತ್ಯುತ್ತಮವಾದ ರಾಸಾಯನಿಕವಾಗಿದ್ದು ಹಳದಿ ಉಗುರುಗಳ ಬಣ್ಣ ಬದಲಿಸಲೂ ಸಹಕಾರಿಯಾಗಿದೆ. ಇದಕ್ಕಾಗಿ ಎರಡು ಚಿಕ್ಕ ಚಮಚ ಅಡುಗೆ ನೋಡಾವನ್ನು ಮೂರು ಅಥವಾ ನಾಲ್ಕು ದೊಡ್ಡ ಚಮಚ ಶುದ್ಧ ನೀರಿಗೆ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಉಗುರುಗಳಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿದರೆ ಸಾಕು.


ಟೂಥ್ ಪೇಸ್ಟ್ : ಕೆಲವು ಹಲ್ಲುಜ್ಜುವ ಕ್ರೀಂಗಳಲ್ಲಿ ಬಿಳಿಯಾಗಿಸುವ ಗುಣವಿದೆ. ಈ ಗುಣ ಉಗುರನ್ನುಕೂಡ  ಬಿಳಿಯಾಗಿಸಲೂ ಸಹಕಾರಿಯಾಗಿದೆ. ಕೊಂಚ ಟೂಥ್ ಪೇಸ್ಟ್ ಅನ್ನು ನೇರವಾಗಿ ಉಗುರುಗಳ ಮೇಲೆ ತೆಳುವಾಗಿ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಶೀಘ್ರವೇ ಬಿಳಿಯಾದ ಉಗುರುಗಳನ್ನು ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments