ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಫೇಸ್ ಕ್ರೀಮ್‌ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುವ ಬದಲು ಮನೆಯಲ್ಲೆ ಆದನ್ನು ತಯಾರಿಸಿ ಬಳಸಿ. ಇದರಿಂದ ಮುಖ ಅಂದವಾಗಿ, ಕೋಮಲವಾಗಿಯೂ ಇರುತ್ತದೆ.
ಇದಕ್ಕೆ ಬೇಕಾಗುವ ಸಾಮಾಗ್ರಿಗಳು:
ಬಾದಾಮಿ ಎಣ್ಣೆ – ½ ಕಪ್
ತೆಂಗಿನ ಎಣ್ಣೆ – 2 ಟೇಬಲ್ಸ್ಪೂನ್ಗಳು
ಬೀಸ್ವ್ಯಾಕ್ಸ್- 2 ಟೇಬಲ್ಸ್ಪೂನ್ಗಳು
ವಿಟಮಿನ್ ಇ ಎಣ್ಣೆ – ½ ಟೀಸ್ಪೂನ್
ಶಿಯಾ ಬಟರ್ – 1 ಟೇಬಲ್ಸ್ಪೂನ್
ಎಸೆನ್ಶಿಯಲ್ ಆಯಿಲ್ (ಬೇಕಾದರೆ ಸೇರಿಸಿಕೊಳ್ಳಿ)
ಎಲ್ಲಾ ಪದಾರ್ಥಗಳನ್ನು ಒಂದು ಗಾಜಿನ ಜಾರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ. ಆ ಪದಾರ್ಥಗಳ ಎಷ್ಟು ಇವೆಯೋ ಅದಕ್ಕೆ ಮೂರು ನಾಲ್ಕು ಇಂಚಿನಷ್ಟು ನೀರು ಹಾಕು ಸ್ಟೌವ್ ಮೇಲೆ ಸಿಮ್ಮರ್‌ನಲ್ಲಿಟ್ಟು ಕಾಯಿಸಿಕೊಳ್ಳಿ. ಈ ಗಾಜಿನ ಜಾಡಿಯಲ್ಲಿ ಪದಾರ್ಥಗಳನ್ನು ಹಾಕಿ, ತಟ್ಟೆ ಮುಚ್ಚಬೇಡಿ, ಪದಾರ್ಥಗಳನ್ನು ಕರಗಲು ಅವಕಾಶ ಮಾಡಿಕೊಡಿ. ಹೀಗೆ ಬೇಯಿಸುವಾಗ ಈ ಪದಾರ್ಥಗಳನ್ನು ಚೆನ್ನಾಗಿ ಕಲೆಸಿಕೊಡಿ. ಎಲ್ಲಾ ಪದಾರ್ಥಗಳು ಸರಿಯಾಗಿ ಕರಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ನಂತರ ಈ ದ್ರವವನು ಒಂದು ಸಣ್ಣ ಗಾಜಿನ ಜಾರ್‌ಗೆ ಹಾಕಿಕೊಂಡು ತಣ್ಣಗಾಗಲು ಬಿಡಿ. ಯಾವಾಗ ಈ ದ್ರವವು ಕ್ರೀಮ್‌ನಷ್ಟು ತೆಳ್ಳಗಾಗುತ್ತದೆಯೋ, ಆಗ ಅದನ್ನು ಮುಚ್ಚಿ ತಣ್ಣಗಿರುವ ಜಾಗದಲ್ಲಿಡಿ. ಈ ಕ್ರೀಮ್ ಅನ್ನು ಪ್ರತಿದಿನ ಬೆಳಗ್ಗೆ ಹಾಗು ರಾತ್ರಿ ನಿಮ್ಮ ಮುಖದ ಕ್ಲೀನಿಂಗ್ ಮತ್ತು ಡ್ರೈಯಿಂಗ್ ಉದ್ದೇಶಕ್ಕೆ ಬಳಸಬಹುದು
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ