ಬೆಂಗಳೂರು: ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಒಣ ಹವೆಯಿಂದಾಗಿ ತುಟಿಗಳು ಶುಷ್ಕವಾಗುತ್ತದೆ ಮತ್ತು ನೋಡಲು ಆಕರ್ಷಕವಾಗಿರುವುದಿಲ್ಲ. ಹಾಗಾಗಿ ತುಟಿಗಳು ಕೋಮಲ ಮತ್ತು ಸುಂದರವಾಗಿ ಕಾಣಬೇಕಾದರೆ ಏನು ಮಾಡಬೇಕು ನೋಡೋಣ.
ಚಳಿಗಾದಲ್ಲಿ ತುಟಿಗಳು ಬಿರುಕು ಬಿಡುವುದು ಸಾಮಾನ್ಯ. ಬೇಸಿಗೆ ಕಾದಲ್ಲಿ ಡಿಹೈಡ್ರೇಷನ್ ನಿಂದಾಗಿ ತುಟಿಗಳಲ್ಲಿ ಬಿರುಕುಂಟಾಗುತ್ತದೆ. ಇದರಿಂದಾಗಿ ತುಟಿಗಳು ಕೋಮಲತ್ವ ಕಳೆದುಕೊಳ್ಳುತ್ತದೆ. ಹೀಗಾಗಿ ತುಟಿಗಳು ಎಲ್ಲಾ ಕಾಲದಲ್ಲೂ ಸುಂದರವಾಗಿ ಮತ್ತು ಕೋಮಲವಾಗಿ ಕಾಣಲು ಮನೆಯಲ್ಲಿಯೇ ನಾವು ಮಾಡಬಹುದಾದ ಕೆಲವೊಂದು ಸಿಂಪಲ್ ಟ್ರಿಕ್ಸ್ ಇಲ್ಲಿದೆ.
ತುಟಿಗಳು ತೇವಾಂಶ ಕಳೆದುಕೊಳ್ಳದಂತೆ ಮತ್ತು ಜೀವ ಕಳೆದುಕೊಂಡಂತೆ ಅನಿಸದೇ ಇರಲು ಒದ್ದೆ ಟವೆಲ್ ನಿಂದ ಕೆಲವು ನಿಮಿಷಗಳ ಕಾಲ ಸ್ಕ್ರಬ್ ಮಾಡುತ್ತಿರಿ. ಇದರಿಂದ ತುಟಿಗಳು ಜೀವಂತಿಕೆಯಿಂದ ಕಂಡುಬರುತ್ತದೆ. ಸ್ಕ್ರಬ್ ಮಾಡಲು ನೀವು ಈ ಕೆಳಗಿನವುಗಳನ್ನೂ ಬಳಸಬಹುದು.
ಸಕ್ಕರೆ ಮತ್ತು ಜೇನು ತುಪ್ಪದ ಮಿಶ್ರಣವನ್ನು ಬಳಸಿ
ನಿಂಬೆ ರಸ ಮತ್ತು ಪೆಟ್ರೋಲಿಯಂ ಜೆಲ್ಲಿ ಬಳಸಿ
ಹಾಲಿನ ಕೆನೆ ಬಳಸಿ ಉಜ್ಜಿಕೊಳ್ಳಿ
ಸಕ್ಕರೆ, ತೆಂಗಿನ ಎಣ್ಣೆ ಮತ್ತು ಜೇನು ಸೇರಿಸಿ ಮಿಶ್ರಣ ತಯಾರಿಸಿ
ಕಿತ್ತಳೆ ಪುಡಿ, ಕಂದು ಸಕ್ಕರೆ ಮತ್ತು ಬಾದಾಮಿ ಎಣ್ಣೆ ಮಿಶ್ರಣದಿಂದ ಸ್ಕ್ರಬ್ ಮಾಡಿಕೊಳ್ಳಿ.
ಇವೆಲ್ಲವೂ ನಿಮಗೆ ಮನೆಯಲ್ಲಿಯೇ ಸುಲಭವಾಗಿ ಸಿಗುತ್ತದೆ. ಹೀಗಾಗಿ ಇವುಗಳಿಂದ ತುಟಿಗಳನ್ನು ಸ್ಕ್ರಬ್ ಮಾಢುತ್ತಿದ್ದರೆ ತೇವಾಂಶ ಉಳಿಯುವುದಲ್ಲದೆ, ತುಟಿಗಳು ಮೃದು ಮತ್ತು ಸುಂದರವಾಗಿ ಗೋಚರಿಸುತ್ತದೆ.