ಬೆಂಗಳೂರು : ಸೊಂಪಾದ ಮತ್ತು ನೀಳ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಕನಸಾಗಿದೆ. ಆದರೆ ಈ ಕೂದಲು ಬಿಡಿಬಿಡಿಯಾಗಿ, ಸಿಕ್ಕಿಲ್ಲದೇ ಎಣ್ಣೆಜಿಡ್ಡಿಲ್ಲದೇ ಇರುವಂತೆ ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಈ ಜಿಡ್ಡು ಅನಾರೋಗ್ಯಕರವಂತೂ ಅಲ್ಲ, ಆದರೆ ಕೂದಲ ಆರೈಕೆಯನ್ನು ಸರಿಯಾಗಿ ಇಟ್ಟುಕೊಳ್ಳದೇ ಇದ್ದರೆ ಈ ಎಣ್ಣೆಜಿಡ್ಡಿಗೆ ಅಂಟಿಕೊಳ್ಳುವ ಗಾಳಿಯ ಕೊಳೆ, ಧೂಳು ಹಾಗೂ ಇತರ ಕಲ್ಮಶಗಳು ಕೂದಲ ಜಿಡ್ಡುತನವನ್ನು ಇನ್ನಷ್ಟು ಹೆಚ್ಚಿಸಿ ಸೌಂದರ್ಯದ ಜೊತೆಗೇ ಕೂದಲ ಆರೋಗ್ಯವನ್ನೂ ಕುಂದಿಸುತ್ತವೆ. ಇಂತಹ ಜಿಡ್ಡನ್ನು ಹೋಗಲಾಡಿಸಲು ಇಲ್ಲಿದೆ ನೋಡಿ ಪರಿಹಾರ.
ಲಿಂಬೆ ಹಣ್ಣು: ಕೂದಲು ಮತ್ತು ತ್ವಚೆಗೆ ಲಿಂಬೆ ಅಧ್ಬುತವೆನಿಸುವ ಆರೈಕೆಯನ್ನು ನೀಡುತ್ತದೆ. ಕೂದಲ ಬಳಕೆಗಾಗಿ ಎರಡು ಲಿಂಬೆಗಳ ರಸವನ್ನು ಎರಡು ಕಪ್ ನೀರಿನಲ್ಲಿ ಬೆರೆಸಿ ಒಂದು ಚಿಕ್ಕ ಬಾಟಲಿಯಲ್ಲಿ ಹಾಕಿಡಿ. ಪ್ರತಿ ಬಾರಿ ತಲೆಸ್ನಾನ ಮಾಡಿದ ಬಳಿಕ ಕೊಂಚವೇ ದ್ರವವನ್ನು ಕೈಗಳಲ್ಲಿ ತೆಗೆದುಕೊಂಡು ನೆತ್ತಿಯ ಮೇಲೆ ಸುರಿದುಕೊಂಡು ನಯವಾಗಿ ತಟ್ಟಿಕೊಳ್ಳಿ ಹಾಗೂ ಕೂದಲ ತುದಿಯವರೆಗೆ ಬರುವಂತೆ ಒರೆಸಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಕೇವಲ ತಣ್ಣೀರಿನಿಂದ ಕೂದಲನ್ನು ತೋಯಿಸಿ ದಪ್ಪ ಟವೆಲ್ಲಿನಿಂದ ಒತ್ತಿಕೊಂಡು ಒಣಗಿಸಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ