ಬೆಂಗಳೂರು : ಕೈಗಳು ಅಂದವಾಗಿ ಕಾಣಲು ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಬೇಕು. ಆದಕಾರಣ ನೈಲ್ ಪಾಲಿಶ‍್ ಹಚ್ಚುವಾಗ ಅವರವರ ಸ್ಕೀನ್ ಕಲರ್ ಗೆ ತಕ್ಕಂತಹ ಕಲರ್ ಅನ್ನು ಹಚ್ಚಬೇಕು. ಆಗ ಕೈಗಳು ಇನ್ನೂ ಆಕರ್ಷಕವಾಗಿ ಕಾಣುತ್ತವೆ.
ಸ್ಕೀನ್ ಬಣ್ಣ ಬಿಳಿಯಾಗಿದ್ದರೆ ಅಂತವರು ತಮ್ಮ ಉಗುರುಗಳಿಗೆ ಗಾಢವಾದ ಬಣ್ಣಗಳನ್ನು ಹಚ್ಚಿಕೊಂಡಿರೆ ಆಕರ್ಷಕವಾಗಿ ಕಾಣುತ್ತದೆ. ಉದಾ: ಹಸಿರು, ಕೆಂಪು, ಕಪ್ಪು, ನೇರಳೆ ಮುಂತಾದವು.
ಹಾಗೇ ಸ್ಕೀನ್ ಕಲರ್ ಗಾಢ ಬಣ್ಣವಿರುವವರು ಉಗುರುಗಳಿಗೆ ತಿಳಿ ಬಣ್ಣದ ನೈಲ್ ಪಾಲಿಶ್ ಗಳನ್ನು ಹಚ್ಚಿ. ಇದರಿಂದ ಅವರ ಕೈಗಳು ಸುಂದರವಾಗಿ ಕಾಣುತ್ತದೆ.