ಬೆಂಗಳೂರು: ರಾತ್ರಿ ಬಿಗಿಯಾದ ಬಟ್ಟೆ ಧರಿಸಿ ಮಲಗುವವರು ಎಚ್ಚರದಿಂದಿರಿ. ಏಕೆಂದರೆ ಇದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಬಿಗಿಯಾದ ಬಟ್ಟೆಗಳನ್ನು ರಾತ್ರಿ ಧರಿಸುವುದರಿಂದ ನಮ್ಮ ದೇಹದ ಬೆಳವಣಿಗೆಯ ಹಾರ್ಮೋನು ಉತ್ಪತ್ತಿಯಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ದೇಹದ ಬೆಳವಣಿಗೆ ಕುಂಠಿತವಾಗುತ್ತದೆ.
ಆದ್ದರಿಂದ ರಾತ್ರಿ ಮಲಗುವಾಗ ಬೆತ್ತಲೆಯಾಗಿ ಮಲಗುವುದನ್ನು ರೂಢಿಮಾಡಿಕೊಳ್ಳಿ. ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿದ್ರಿಸುವಾಗ ನಮ್ಮ ಮೆದುಳಿಗೆ ಹದವಾದ ದೇಹದ ತಾಪಮಾನದ ಅಗತ್ಯವಿದೆಯಂತೆ. ಆದ ಕಾರಣ ರಾತ್ತಿ ವಿಪರೀತವಾಗಿ ಹೊದ್ದುಕೊಂಡು ಮಲಗಬಾರದು. ಬೆತ್ತಲೆಯಾಗಿ ಮಲಗುವುದರಿಂದ ದೇಹದ ತಾಪಮಾನ ಹದವಾಗಿರುತ್ತದೆ.
ಒತ್ತಡ ರಹಿತ ದೇಹವಿದ್ದರೆ ನಮಗೆ ಸುಖವಾಗಿ ನಿದ್ರಿಸಲು ಸಾಧ್ಯವಾಗುತ್ತದೆ. ಹಾಗೆ ಮಹಿಳೆಯರು ಮತ್ತು ಪುರುಷರು ರಾತ್ರಿ ಮಲಗುವಾಗ ಬೆತ್ತಲೆಯಾಗಿ ಮಲಗಿದ್ದರೆ ಅವರ ಗುಪ್ತಾಂಗಗಳಿಗೆ ಗಾಳಿ ತಗಲುವುದರಿಂದ ಸೋಂಕು ಉಂಟಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ