Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕೆಲವರಿಗೆ ಅಂಗಡಿಯಲ್ಲಿ ಸಿಗುವ ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದು ಇಷ್ಟವಿರುವುದಿಲ್ಲ. ಅಥವಾ ಆಗಿ ಬರುವುದಿಲ್ಲ. ಅದಕ್ಕೆ ಮನೆಯಲ್ಲೇ ಲಿಪ್ ಸ್ಟಿಕ್ ತಯಾರಿಸಿಕೊಳ್ಳಬಹುದು.
ಅದು ತುಂಬಾ ಸುಲಭ ಮತ್ತು ಸರಳ. ಹಾಗೂ ಅಷ್ಟೇ ಸುರಕ್ಷಿತ ಕೂಡಾ. ಮಕ್ಕಳಿಗೆ ಕೂಡಾ ಇದನ್ನು ಮಾಡಿ ಅಂದಗಾತಿಯಾಗಿ ಮಾಡಬಹುದು. ಮಾಡುವುದು ಹೇಗೆ ಏನೆಲ್ಲಾ ಬೇಕು ತಿಳಿದುಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಬೀಟ್ ರೂಟ್
ವ್ಯಾಸ್ ಲಿನ್
ಕೊಬ್ಬರಿ ಎಣ್ಣೆ
ಮಾಡೋದು ಹೇಗೆ?
ಬೀಟ್ ರೂಟ್ ಸಿಪ್ಪೆ ತೆಗೆದು ತುರಿದುಕೊಂಡು ರಸ ತೆಗೆದಿಟ್ಟುಕೊಳ್ಳಿ. ಇದಕ್ಕೆ ಎರಡು ಚಮಚ ವ್ಯಾಸ್ ಲಿನ್ ಪೆಟ್ರೋಲಿಯಂ ಜೆಲ್, ಎರಡು ಚಮಚ ಕೊಬ್ಬರಿ ಎಣ್ಣೆ ಹಾಕಿ. ನಂತರ ಇದನ್ನು ಮಿಕ್ಸ್ ಮಾಡಿಕೊಂಡು ಗಾಳಿಯಾಡದ ಪಾತ್ರೆಗೆ ಸುರುವಿಕೊಂಡು ಫ್ರಿಜ್ ನಲ್ಲಿಡಿ. ಇದು ಹದವಾಗಿ ಗಟ್ಟಿಯಾದಾಗ ತುಟಿಗೆ ಹಚ್ಚಿಕೊಂಡು ನೋಡಿ. ಕಡು ಬಣ್ಣದ ಮೆರುಗು ನಿಮ್ಮ ತುಟಿಯ ಅಂದ ಹೆಚ್ಚಿಸುತ್ತದೆ.