ಬೆಂಗಳೂರು: ಇತ್ತೀಚೆಗೆ ಪುರುಷರಲ್ಲೂ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವ ಕಾಳಜಿ ಹೆಚ್ಚುತ್ತಿದೆ. ಅಂತಹವರಿಗಾಗಿ ಇಲ್ಲಿದೆ ಕೆಲವು ಟಿಪ್ಸ್.
ನೀರು ಸೇವಿಸಿ
ಸಾಕಷ್ಟು ನೀರು ಸೇವಿಸಲು ಮರೆಯಬೇಡಿ. ನೀರು ಹೆಚ್ಚು ಸೇವಿಸಿದಷ್ಟು ತ್ವಚೆಯ ತೇವಾಂಶ ಉಳಿಯುತ್ತದೆ.
ತೇವಾಂಶ ಕ್ರೀಮ್
ಚಳಿಗಾಲದಲ್ಲಂತೂ ಕೇಳುವುದೇ ಬೇಡ. ಆಗಾಗ ತೇವಾಂಶದ ಕ್ರೀಮ್ ಹಚ್ಚಿಕೊಳ್ಳುತ್ತಿದ್ದರೆ ಅಥವಾ ಬೆಳಿಗ್ಗೆ ಸ್ನಾನದ ನಂತರ ಮನೆಯಿಂದ ಹೊರಡುವ ಮೊದಲು ಕ್ರೀಮ್ ಹಚ್ಚಿಕೊಂಡರೆ ಸಾಕು. ಚರ್ಮ ಒಣಗಿದಂತೆ ಕಾಣದು.
ಆಹಾರ
ಆದಷ್ಟು ಹೆಚ್ಚು ಹೆಚ್ಚು ಹಣ್ಣು ತರಕಾರಿಗಳನ್ನು ಹೇರಳವಾಗಿ ಸೇವಿಸುತ್ತಿರಿ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.
ದೇಹ ದಂಡನೆ
ಸೋಮಾರಿಗಳಂತೆ ಕೂರಬೇಡಿ. ಆದಷ್ಟು ವರ್ಕೌಟ್ ಮಾಡಿ. ದೇಹ ದಂಡಿಸುವ ಕೆಲಸ ಅಥವಾ ದೇಹಕ್ಕೆ ಚಟುವಟಿಕೆ ನೀಡಿ.
ನಿದ್ರೆ
ಸಾಕಷ್ಟು ನಿದ್ರೆ ಮಾಡುವುದೂ ಸೌಂದರ್ಯದ ಗುಟ್ಟು. ದಿನದಲ್ಲಿ 7-8 ಗಂಟೆ ನಿದ್ರೆ ಮಾಡಿದರೆ ಚರ್ಮವೂ ಪೇಲವವಾಗಿ ಕಾಣದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ