Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿಯೊಬ್ಬರನ್ನು ಕಾಡುತ್ತೆ!

ಪ್ರಸವದ ನಂತರ ಕೂದಲು ಉದುರುವ ಸಮಸ್ಯೆಗೆ ಇಲ್ಲಿವೆ ಪರಿಹಾರಗಳು

ಪ್ರತಿಯೊಬ್ಬರನ್ನು ಕಾಡುತ್ತೆ!
Bangalore , ಗುರುವಾರ, 1 ಜುಲೈ 2021 (12:47 IST)
Bangalore:ಪ್ರಸವದ ನಂತರ ಕೂದಲು ಉದುರುವುದು ಸಾಮಾನ್ಯ. ಇದಕ್ಕೆ ನೀವು ಭಯಪಡದಿದ್ದರೆ ಏನು ಮಾಡಬೇಕಾಗಿಲ್ಲ. ಆದರೆ ಕೆಲವರು ಕೂದಲು ಉದರುತ್ತಿದ್ದಂತೆ ಭಯಗೊಳ್ಳುತ್ತಾರೆ. ನಿಮಗೆ ಕೂದಲು ಉದುರುವುದು ಸಮಸ್ಯೆಯಾಗಿ ಕಾಣುತ್ತಿದ್ದರೆ, ನಿಮ್ಮ ಕೂದಲು ಬೆಳೆಯುವುದಕ್ಕೆ ಕೆಲವು ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು.






















ತಾಯ್ತನ ಪ್ರತಿ ಹೆಣ್ಣು ಮಕ್ಕಳಿಗೂ ವಿಶೇಷ ಅನುಭವ.
ಹೆರಿಗೆಯ ಸಮಯ ಹತ್ತಿರವಾಗುತ್ತಿದ್ದಂತೆ ಮಗುವಿನ ಮುಖ ನೋಡಲು ತಾಯಿಯು ಹಂಬಲಿಸುತ್ತಿರುತ್ತಾಳೆ. ಈ ಖುಷಿಯಲ್ಲಿ ಆಕೆ ಕೆಲವು ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದರಲ್ಲಿ ಕೂದಲ ಆರೈಕೆಯು ಒಂದು. ಹೌದು ಕೆಲವರು ಗರ್ಭಧಾರಣೆಯು ಕೂದಲನ್ನು ದಪ್ಪ ಮತ್ತು ದಟ್ಟವಾಗಿಸುತ್ತದೆ ಎಂದು ತಿಳಿಯುತ್ತಾರೆ. ಇದರ ಜೊತೆಗೆ ಮಗು ಪಡೆಯುವ ಒತ್ತಡವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂಬುದನ್ನು ನಾವು ಕಂಡುಕೊಳ್ಳಬೇಕು.
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಹಾಗೂ ಪ್ರಸವದ ನಂತರ ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಅದರಲ್ಲೂ ಮುಖ್ಯವಾಗಿ ಗರ್ಭವತಿಯಾಗಿದ್ದಾಗ ಹಾರ್ಮೋನುಗಳಲ್ಲಿ ಬದಲಾವಣೆ ಸಂಭವಿಸುತ್ತದೆ.
ಗರ್ಭಧಾರಣೆಯ ಮೊದಲ ಹಂತ ಕೋರಿಯಾನಿಕ್ ಗೊನಡೋಟ್ರೋಪಿನ್ ಅಥವಾ ಎಚ್ಸಿಜಿ. ಇದು ಗರ್ಭಧಾರಣೆಯನ್ನು ಅಳೆಯುವ ಹಾರ್ಮೋನು. ಇದರಲ್ಲಿ ಹೆಚ್ಚಳವಾದಂತೆ ಮಹಿಳೆಯು ಗರ್ಭವತಿಯಾಗಿದ್ದಾಳೆ ಎಂಬುದು ಖಚಿತವಾಗುತ್ತದೆ. ಗರ್ಭಧಾರಣೆಯು ಈಸ್ಟ್ರೊಜೆನ್, ಪ್ರೊಜೆಸ್ಟರಾನ್, ಆಕ್ಸಿಟೋಸಿನ್ ಮತ್ತು ಪ್ರೊಲ್ಯಾಕ್ಟಿನ್ ಸೇರಿದಂತೆ ಹಲವಾರು ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತದ ಪ್ರಮಾಣವು ಹೆರಿಗೆಯ ನಿಗದಿತ ದಿನಾಂಕದ ವೇಳೆಗೆ ಸಾಮಾನ್ಯಕ್ಕಿಂತ 50 ಪ್ರತಿಶತದಷ್ಟು ಹೆಚ್ಚಾಗುತ್ತದೆ.
ಮಗು ಜನಿಸಿದ ತಕ್ಷಣ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಸೇರಿದಂತೆ ಹಲವಾರು ಹಾರ್ಮೋನ್ ಮಟ್ಟಗಳು ಶೀಘ್ರವಾಗಿ ಇಳಿಯುತ್ತವೆ. ಆ ಹಾರ್ಮೋನುಗಳು ಜನನದ ನಂತರ 24 ಗಂಟೆಗಳೊಳಗೆ ಸಾಮಾನ್ಯ ಮಟ್ಟಕ್ಕೆ ಮರಳುತ್ತವೆ, ಆದರೂ ಸ್ತನ್ಯಪಾನ ಮಾಡುವವರೆಗೂ ಪ್ರೊಲ್ಯಾಕ್ಟಿನ್ ಅಧಿಕವಾಗಿರುತ್ತದೆ. ಇನ್ನು ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ, ಮಗು ಬಂದ ಕೆಲವು ವಾರಗಳ ನಂತರ ಅದು ಸಾಮಾನ್ಯ ಸ್ಥಿತಿಗೆ ಬರುತ್ತದೆ.

webdunia



















ಹಾರ್ಮೋನ್ ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಗರ್ಭಾವಸ್ಥೆಯಲ್ಲಿ ಹಾಗೂ ಪ್ರಸವದ ನಂತರ ಹಾರ್ಮೋನುಗಳಲ್ಲಿ ಸಂಭವಿಸುವ ಏರಿಳಿತವೇ ಕೂದಲು ಉದುರುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚಾಗುವ ಈಸ್ಟ್ರೊಜೆನ್ ಎಂಬ ಅಂಶ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದು ಹೆಚ್ಚು ಕೂದಲು ಉದುರುವುದನ್ನು ತಡೆಯುತ್ತದೆ. ಗರ್ಭಾವಸ್ಥೆಯಲ್ಲಿ, ನಿಮ್ಮ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಆದರೆ ಹೆಚ್ಚಿದ ರಕ್ತದ ಪ್ರಮಾಣ ಮತ್ತು ರಕ್ತಪರಿಚಲನೆಯು ಕೂದಲು ಸಾಮಾನ್ಯಕ್ಕಿಂತ ಕಡಿಮೆಯಾಗಲು ಕಾರಣವಾಗುತ್ತದೆ.
ಪ್ರಸವದ ನಂತರ ಯಾವ ಸಮಯದಲ್ಲಾದರೂ ಕೂದಲು ಉದುರುವಿಕೆ ಶುರುವಾಗಬಹುದು. ಇದಕ್ಕೆ ನಿಗದಿತ ಸಮಯವೆಂಬುದಿಲ್ಲ ಮತ್ತು ಕೂದಲು ಉದುರುವಿಕೆ ಒಂದು ವರ್ಷದವರೆಗೂ ಮುಂದುವರೆಯುತ್ತದೆ. ಅಂದರೆ ಮಗುವಿಗೆ ಸುಮಾರು ನಾಲ್ಕು ತಿಂಗಳಿರುವಾಗ ಕೂದಲು ಉದುರಲು ಶುರುವಾಗುತ್ತದೆ. ಮಗು ವಯಸ್ಸು ಹೆಚ್ಚಾಗುತ್ತಿದ್ದಂತೆ ಕೂದಲು ಉದುರುವುದು ಮುಂದುವರೆಯುತ್ತದೆ. ಆದರೆ ಇದಕ್ಕೆ ಭಯಪಡುವ ಅವಶ್ಯಕತೆ ಇಲ್ಲ.
ಪ್ರಸವದ ನಂತರ ಕೂದಲ ಚಿಕಿತ್ಸೆಗಳು

webdunia



















ಪ್ರಸವದ ನಂತರ ಕೂದಲು ಉದುರುವುದು ಸಾಮಾನ್ಯ. ಇದಕ್ಕೆ ನೀವು ಭಯಪಡದಿದ್ದರೆ ಏನು ಮಾಡಬೇಕಾಗಿಲ್ಲ. ಆದರೆ ಕೆಲವರು ಕೂದಲು ಉದರುತ್ತಿದ್ದಂತೆ ಭಯಗೊಳ್ಳುತ್ತಾರೆ. ನಿಮಗೆ ಕೂದಲು ಉದುರುವುದು ಸಮಸ್ಯೆಯಾಗಿ ಕಾಣುತ್ತಿದ್ದರೆ, ನಿಮ್ಮ ಕೂದಲು ಬೆಳೆಯುವುದಕ್ಕೆ ಕೆಲವು ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು.
 

Share this Story:

Follow Webdunia kannada

ಮುಂದಿನ ಸುದ್ದಿ

ಆಯುರ್ವೇದದಲ್ಲಿದೆ ಸಮಸ್ಯೆಗಳಿಗೆ ರಾಮ ಬಾಣ! ಮಹಿಳೆಯರು ತಪ್ಪದೇ ಓದಿ