Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚರ್ಮ, ಕೂದಲಿನ ಕಾಂತಿಗೆ ಹಲಸಿನ ಬೀಜ ತಿನ್ನಿ!

ಚರ್ಮ, ಕೂದಲಿನ ಕಾಂತಿಗೆ ಹಲಸಿನ ಬೀಜ ತಿನ್ನಿ!
Bangalore , ಬುಧವಾರ, 10 ಮೇ 2017 (07:21 IST)
ಬೆಂಗಳೂರು: ಹಲಸಿನ ಹಣ್ಣಿನಲ್ಲಿ ಸುಮ್ಮನೇ ಬಿಸಾಕುವ ಭಾಗವೆಂದರೆ ಹೊರಗಿನ ಆವರಣ ಮಾತ್ರ. ಉಳಿದ ಭಾಗವೆಲ್ಲಾ ಒಂದೊಂದು ರೀತಿಯಲ್ಲಿ ಉಪಯೋಗಕ್ಕೆ ಬರುವಂತಹದ್ದೇ.

 
ಹಲಸಿನ ಬೀಜ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಎನ್ನುವವರೆಲ್ಲಾ ಇದನ್ನು ತಿಳಿದುಕೊಳ್ಳಲೇ ಬೇಕು. ಹಲಸಿನ ಬೀಜ ತಿಂದರೆ ಆರೋಗ್ಯ ಉತ್ತಮವಾಗುವುದಷ್ಟೇ ಅಲ್ಲ, ಸೌಂದರ್ಯಕ್ಕೂ ಒಳ್ಳೆಯದು.

ಚರ್ಮ ಸುಕ್ಕುಗಟ್ಟುವುದು
ಮುಖದ ಚರ್ಮ ಕಾಂತಿಯುತವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಮುಖದ ಚರ್ಮ ಸುಕ್ಕುಗಟ್ಟಿದ್ದರೆ, ಹಾಲಿನೊಂದಿಗೆ ಹಲಸಿನ ಬೀಜವನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖದ ಅಂದ ಹೆಚ್ಚಾಗುವುದು.

ಚರ್ಮ ರೋಗಗಳಿಗೆ
ಹಲಸಿನ ಬೀಜದಲ್ಲಿ ಪೋಷಕಾಂಶಗಳ ಆಗರವೇ ಅಡಗಿರುವುದರಿಂದ, ಮಾನಸಿಕ ಒತ್ತಡ ನಿವಾರಣೆಯಾಗುವುದಲ್ಲದೆ, ಚರ್ಮ ಸಂಬಂಧಿ ರೋಗಗಳು ನಿವಾರಣೆಯಾಗುವುದು.

ರಕ್ತಹೀನತೆ
ರಕ್ತಹೀನತೆಯಿಂದ ಬಳಲುತ್ತಿರುವವರು ದಿನಕ್ಕೊಂದು ಹಲಸಿನ ಬೀಜ ಸೇವಿಸಿದರೆ ಉತ್ತಮ. ಇದರಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ದೇಹಾರೋಗ್ಯ ಹೆಚ್ಚಿಸುತ್ತದೆ.

ಕೂದಲು ಮತ್ತು ಕಣ್ಣಿನ ಆರೋಗ್ಯಕ್ಕೆ
ಇದರಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ಕೂದಲು ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮ. ರಾತ್ರಿ ದೃಷ್ಟಿ ಹೀನರಾಗುವ ಸಮಸ್ಯೆಯಿರುವವರಿಗೂ ಇದರ ಸೇವನೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಈ ಹಣ್ಣುಗಳನ್ನು ಸೇವಿಸಿದ ಮೇಲೆ ನೀರು ಕುಡಿಯಲೇಬೇಡಿ!