ಬೆಂಗಳೂರು: ನಾವು ಸೇವಿಸುವ ಆಹಾರ ಯಾವ ರೀತಿ ಸೇವಿಸಬೇಕು ಎನ್ನುವುದಕ್ಕೊಂದು ರೀತಿ ನೀತಿಯಿದೆ. ಅದನ್ನು ತಪ್ಪಿ ನಡೆದರೆ ಆ ಆಹಾರದ ಫಲ ನಮಗೆ ಸಿಗದು.
ಕೆಲವು ಹಣ್ಣುಗಳನ್ನು ಸೇವಿಸಿದ ಮೇಲೆ ನೀರು ಕುಡಿಯಬಾರದು ಎನ್ನುತ್ತಾರೆ ತಜ್ಞರು. ಕಲ್ಲಂಗಡಿ ಹಣ್ಣು, ಸ್ಟ್ರಾಬೆರಿ, ಕರಬೂಜ, ಸೌತೆಕಾಯಿ, ಕಿತ್ತಳೆ, ಅನಾನಾಸು, ದ್ರಾಕ್ಷಿಯಂತಹ ಹಣ್ಣಿನ ಸೇವನೆಯ ನಂತರ ನೀರು ಕುಡಿಯಬಾರದು.
ಇದಕ್ಕೆ ಕಾರಣವೇನೆಂದರೆ, ಇವುಗಳೆಲ್ಲಾ ಸಾಕಷ್ಟು ನೀರಿನಂಶವಿರುವ ಹಣ್ಣುಗಳೇ. ಇದರ ಮೇಲೆ ನೀರು ಕುಡಿಯುವುದರಿಂದ ದೇಹದಲ್ಲಿ ಪಿಎಚ್ ಲೆವೆಲ್ ನಿಯಂತ್ರಣ ಕಳೆದುಕೊಳ್ಳುತ್ತದೆ. ನಮ್ಮ ಜೀರ್ಣಕ್ರಿಯೆಗೆ ಒಂದಷ್ಟು ಪಿಎಚ್ ಲೆವೆಲ್ ನ ಅಗತ್ಯವಿದೆ.
ಅದಕ್ಕಿಂತ ಹೆಚ್ಚಾದರೆ, ಜೀರ್ಣಕ್ರಿಯೆ ಸಮತೋಲನ ತಪ್ಪುತ್ತದೆ. ಹೆಚ್ಚು ನೀರಿನಂಶ ದೇಹ ಪ್ರವೇಶಿಸಿದರೆ, ಜೀರ್ಣ ಪ್ರಕ್ರಿಯೆಯಲ್ಲಿರುವ ಪಿಎಚ್ ಲೆವೆಲ್ ನಿಯಂತ್ರಣ ತಪ್ಪುತ್ತದೆ ಎನ್ನುವ ಕಾರಣಕ್ಕೆ ಮೇಲೆ ಹೇಳಿದಂತಹ ಅಧಿಕ ನೀರಿನಂಶವುಳ್ಳ ಹಣ್ಣುಗಳನ್ನು ಸೇವಿಸಿದ ಮೇಲೆ ನೀರು ಕುಡಿಯಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ