ಬೆಂಗಳೂರು: ಸುಂದರವಾಗಿ ಕಾಣ್ಬೇಕು ಅಂತಾ ಯಾರಿಗೆ ತಾನೆ ಅನ್ಸಲ್ಲ. ಈ ಕಾಳಜಿ ಮಹಿಳೆಯರಲ್ಲಿ ತುಸು ಹೆಚ್ಚೆ ಇರುತ್ತೆ. ಆದ್ರೆ ಮನೆ ಕೆಲಸ, ಅಫೀಸ್ ಕೆಲಸ ಇವುಗಳ ನಡುವೆ ಸುಂದರವಾಗಿ ಕಾಣೋವಂತೆ ಮೇಕಪ್ ಮಾಡ್ಕೋಳ್ಳೋಕೂ ಸಮಯ ಇರಲ್ಲ. ಸುಂದರವಾಗೂ ಕಾಣ್ಬೇಕು, ಮೇಕಪ್ ಗೆ ಜಾಸ್ತಿ ಟೈಂ ಹಿಡಿಬಾರ್ದು. ಅಂತಹ ಕ್ವಿಕ್ ಮೇಕಪ್ ಟಿಪ್ಸ್ ಇಲ್ಲಿದೆ.
* ಮುಖದ ಮೇಲಿನ ಕೂದಲನ್ನು ಫೇಶಿಯಲ್ ಮಾಡಿಸಿ. ಬಹಳಷ್ಟು ಮಹಿಳೆಯರ ಮುಖದ ಕೂದಲು ಎದ್ದು ಕಾಣುವುದರಿಂದ ನಿಮ್ಮ ಅಂದವನ್ನು ಇದು ಕುಗ್ಗಿಸುತ್ತದೆ.
* ನಿಮ್ಮ ಕೂದಲಿಗೆ ಎರಡು ದಿನಕ್ಕೊಮ್ಮೆ ಶಾಂಪೂನಿಂದ ಸ್ನಾನ ಮಾಡಿ ಇದರಿಂದ ಕೂದಲಿನಲ್ಲಿನ ಜಿಡ್ಡಿನಂಶವನ್ನು ಹೋಗಲಾಡಿಸಲು ಸಹಕಾರಿ. ಶಾರ್ಟ್ ಕೂದಲಾಗಿದ್ದರೆ ಅದನ್ನು ಹಾಗೇ ಬಿಟ್ಟು ಬಿಡಿ. ಸ್ವಲ್ಪ ಉದ್ದವಾದ ಕೂದಲಿದ್ದಲ್ಲಿ ಅದನ್ನು ಜಡೆ ಹಾಕುವ ಬದಲು ಒಂದು ಕ್ಲಿಪ್ ಅಥವಾ ರಬ್ಬರ್ ಬ್ಯಾಂಡ್ ಹಾಕಿ ಬಿಡುವುದು ಉತ್ತಮ.
* ನಿಮ್ಮ ಕೈ-ಕಾಲು ತ್ವಚೆಯನ್ನು ಕಾಪಾಡಿಕೊಳ್ಳಲು ಸ್ನಾನದ ನಂತರ ಸ್ವಲ್ಪ ಮಾಶ್ಚುರಾಯೀಸ್ ಹಚ್ಚಿಕೊಳ್ಳಿ. ತೀರಾ ಸಮಯವೇ ಇಲ್ಲವೆಂದಲ್ಲಿ ಒಂದು ದಿನ ಬಿಟ್ಟು ಒಂದು ದಿನ ಬಾಡಿಲೋಷನ್ ಗೆ ಸ್ವಲ್ಪ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಹಚ್ಚಿಕೊಳ್ಳುವುದರಿಂದ ನಿಮ್ಮ ಕೈ-ಕಾಲುಗಳಲ್ಲಿನ ಡ್ರೈನೆಸ್ ಕಡಿಮೆಯಾಗುತ್ತದೆ.
* ಆಗಾಗ ಕೈಗೆ ಮೆನಿಕ್ಯೂರ್ ಮಾಡಿಸಿಕೊಳ್ಳಿ. ನಿಮ್ಮ ಉಗುರುಗಳಿಗೆ ವಾರಕ್ಕೊಮ್ಮೆ ಶೇಪ್ ನೀಡಿ. ಹೀಗೆ ಮಾಡಿದಲ್ಲಿ ಉಗುರುಗಳು ಸುಂದರವಾಗಿ ಕಾಣುತ್ತದೆ.
* ಇನ್ನು ಶೇಪ್ ಮಾಡಿದ ಉಗುರುಗಳಿಗೆ ನೇಲ್ ಪಾಲೀಶ್ ಹಚ್ಚಿಕೊಳ್ಳಿ. ಪದೇ ಪದೇ ನೇಲ್ ಪಾಲೀಶ್ ಹಾಕಲು ಸಮಯವಿಲ್ಲ ಎಂದಾದಲ್ಲಿ. ಕೊನೆ ಪಕ್ಷ ವಾರಕ್ಕೊಮ್ಮೆಯಾದರೂ ನಿಮ್ಮ ಉಗುರಿನ ಬಣ್ಣದ ನೇಲ್ ಪಾಲೀಶ್ ಅನ್ನಾದರೂ ಹಚ್ಚಿ ಇದರಿಂದ ಒಂದು ವೇಳೆ ಮಧ್ಯೆ ಮಧ್ಯೆ ಕಲರ್ ಕಿತ್ತುಹೋದರೂ ಅಷ್ಟಾಗಿ ಗೊಚರಿಸದು. ಜತೆಗೆ ಉಗುರು ಹೊಳಪಿನಿದ ಕಾಣುವುದು.
* ಇನ್ನು ನೈಲ್ ಪಾಲಿಶ್ ಹೆಚ್ಚು ಸಮಯ ಉಗುರಿನಲ್ಲಿ ಹಾಗೆಯೇ ಉಳಿಯಬೇಕಾದರೆ, ನೈಲ್ ಪಾಲಿಶ್ ಹಚ್ಚಿಕೊಂಡ ನಂತರ ಹಾಲಿನ ಕೆನೆಯಿಂದ ಉಗುರನ್ನು ಮಸಾಜ್ ಮಾಡಿ.
* ನಿಮಗೆ ಹೊಂದಿಕೊಳ್ಳುವ ಲಿಪ್‌ಸ್ಟಿಕ್ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಲೈಟ್ ಅಗಿ ಲಿಪ್ ಸ್ಟಿಕ್ ಹಾಕಿ ಅಲಂಕರಿಸಿಕೊಳ್ಳಿ. ಲೈಟ್ ಆಗಿ ಲಿಪ್ ಸ್ಟಿಕ್ ಹಾಕಿಕೊಂಡಲ್ಲಿ ಎಲ್ಲಾರೀತಿಯ ಬಟ್ಟೆಗಳಿಗೂ ಸೂಟ್ ಆಗುವುದರಿಂದ ನಿಮ್ಮ ಅಂದವನ್ನು ಇಮ್ಮಡಿಗೊಳಿಸುತ್ತೆ.