ಬೆಂಗಳೂರು: ಲಿಪ್ ಸ್ಟಿಕ್ ಗಾಢವಾಗಿ ತುಟಿಯಲ್ಲಿ ಉಳಿಯುತ್ತಿಲ್ಲ ಎಂಬ ಚಿಂತೆಯೇ? ಪದೇ ಪದೇ ತುಟಿಗಳಿಗೆ ಲಿಪ್ ಸ್ಟಿಕ್ ಬಳಿದುಕೊಳ್ಳಬೇಕಾದ ಪರಿಸ್ಥಿತಿಯೇ? ಹಾಗಿದ್ದರೆ ಹೀಗೆ ಮಾಡಿ ನೋಡಿ.
ತೇವಾಂಶ ಉಳಿಸಿ
ಲಿಪ್ ಸ್ಟಿಕ್ ತುಂಬಾ ಸಮಯ ಉಳಿಯಲು ತುಟಿಯಲ್ಲಿ ತೇವಾಂಶವಿರುವುದು ಮುಖ್ಯ. ಇದಕ್ಕಾಗಿ ಹಿಂದಿನ ದಿನ ರಾತ್ರಿಯೇ ಕೊಬ್ಬರಿ ಎಣ್ಣೆ ಅಥವಾ ಇನ್ಯಾವುದಾದರೂ ಲಿಪ್ ಬಾಮ್ ಹಚ್ಚಿ ಮಲಗಿ. ಇದರಿಂದ ತುಟಿಗಳ ತೇವಾಂಶ ಹಾಗೇ ಇರುತ್ತದೆ.
ಬ್ರಷ್ ಬಳಸಿ
ಆದಷ್ಟು ಲಿಪ್ ಸ್ಟಿಕ್ ಹಚ್ಚುವಾಗ ಬ್ರಷ್ ಬಳಸಿ ಹಚ್ಚಿ. ಇದರಿಂದ ಗಾಢವಾಗಿ ಉಳಿಯುತ್ತದೆ. ತುಟಿಯ ಮೂಲೆ ಮೂಲೆಗೂ ಸುಲಭವಾಗಿ ಹಚ್ಚುಲು ಇದು ಸಹಾಯವಾಗುತ್ತದೆ.
ಟಿಶ್ಯೂ ಪೇಪರ್ ಬಳಸಿ
ಲಿಪ್ ಸ್ಟಿಕ್ ಹಚ್ಚಿದ ಮೇಲೆ ತುಟಿಗಳ ಮೇಲೆ ಟಿಶ್ಯೂ ಪೇಪರ್ ಇಟ್ಟು ಮೃದುವಾಗಿ ಪ್ರೆಸ್ ಮಾಡಿ. ಇದರಿಂದ ಹೆಚ್ಚು ಕಡಿಮೆಯಾಗಿದ್ದರೆ ಎಲ್ಲಾ ಕಡೆ ಸರಿಯಾಗಿ ಲಿಪ್ ಸ್ಟಿಕ್ ಹರಡಿಕೊಳ್ಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ