Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ದೀಪಿಕಾ ಪಡುಕೋಣೆ ಅದೆಷ್ಟೋ ನಾರಿಯರ ಸ್ಟೈಲ್ ಐಕಾನ್. ಬಾಲಿವುಡ್ ಬೆಡಗಿ ಯಾವ ಡ್ರೆಸ್ ಗೂ ಸರಿಯಾಗಿ ಒಪ್ಪುತ್ತಾರೆ. ಅವರು ಇತ್ತೀಚೆಗೆ ಗ್ಲಾಮರಸ್ ಆಗಿ ಉಟ್ಟುಕೊಂಡಿದ್ದ ಸೀರೆ ಸ್ಟೈಲ್ ಇದೀಗ ಫ್ಯಾಶನ್ ಪ್ರಿಯರಲ್ಲಿ ಭಾರೀ ಸದ್ದು ಮಾಡುತ್ತಿದೆ.
ಎದೆ ಸೀಳು ಕಾಣುವಂತೆ, ಸೀರೆಯೇ ಅಲ್ಲವೇನೋ ಎನ್ನುವಂತಿರುವ ಸೀರೆಯನ್ನು ಉಟ್ಟುಕೊಂಡು ದೀಪಿಕಾ ಅವತಾರ ನೋಡುಗರ ಕಣ್ಣು ಕಕ್ಕುವಂತಿತ್ತು. ಕಡು ನೀಲಿ ಬಣ್ಣದ ಈ ದಿರಿಸು ಇಂಟರ್ನೆಟ್ ನಲ್ಲಿ ಸಂಚಲನವನ್ನೇ ನೋಡಿದೆ.
ವಿನ್ಯಾಸಕಾರ ಸಬ್ಯಸಾಚಿ ಡಿಸೈನ್ ಮಾಡಿದ ಈ ಸೀರೆಗೆ, ನೀಳ ಕುಪ್ಪಸ ತೊಟ್ಟಿದ್ದ ದೀಪಿಕಾ ಹೆಚ್ಚು ಆಭರಣವನ್ನೂ ತೊಟ್ಟಿರಲಿಲ್ಲ. ಹಾಗಿದ್ದರೂ ಸುಂದರವಾಗಿಯೇ ಕಾಣುತ್ತಿದ್ದರು. ಅದೆಷ್ಟು ಜನರ ನಿದ್ದೆ ಕದ್ದರೋ ಈ ಬಾಲಿವುಡ್ ಗ್ಲಾಮರಸ್ ಬೊಂಬೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ