ಟೆನ್ ಶೆನ್ ಹೆಚ್ಚಾದಾಗ, ಸುಸ್ತು ಜಾಸ್ತಿಯಾದಾಗ ನಾವು ಕಾಫಿ ಕುಡಿಯುವುದು ಸಹಜ. ಆದರೆ ಇದೇ ಕಾಫಿಯಿಂದ ಫೇಸ್ ಪ್ಯಾಕ್ ಕೂಡ ಮಾಡಬಹುದು. ಮುಖದ ಮೇಲಿನ ಕಲೆ ನಿವಾರಣೆ ಮಾಡಲು, ಫ್ರೆಶ್ ಫೇಸ್ ನಿಮ್ಮದಾಗಲು ಕಾಫಿ ಫೇಸ್‌ಪ್ಯಾಕ್ ಒಂದು ಉತ್ತಮ ವಿಧಾನ. ನೀವೂ ಕೂಡ ಟ್ರೈಮಾಡಿ ನೋಡಬಹುದು.
ಮುಖದ ಫ್ಯಾಟ್ ಕಡಿಮೆ ಮಾಡಲು ಹಾಗೂ ಇಲಾಸ್ಟಿಸಿಟಿ ಹೆಚ್ಚಿಸಲು ಕಾಫಿ ಪುಡಿ ಬಳಕೆ ಮಾಡುವುದು ಉತ್ತಮ. ಕಾಫಿಯಲ್ಲಿರುವ ಕೆಫೆನ್ ಬ್ಲಡ್ ಸರ್ಕ್ಯುಲೇಶನ್ ಹೆಚ್ಚಿಸಿ ಸ್ಕಿನ್ ಗ್ಲೋ ಆಗಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಮುಖದ ಮೇಲಿನ ಪಿಂಪಲ್ಸ್ ನಿವಾರಣೆ ಮಾಡಲು ಕೂಡ ಇದು ಸಹಕಾರಿಯಾಗಿದೆ.
* 1 ಚಮಚ ಕಾಫಿ ಪೌಡರ್‌ಗೆ ಒಂದು ಚಮಚ ಮೊಸರು ಬಳಕೆ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಒಣಗಿದ ನಂತರ ವಾಶ್ ಮಾಡಿ. ಇದರಿಂದ ಮುಖದ ದೊಡ್ಡ ಪೋರ್ಸ್ ಕಡಿಮೆಯಾಗಿ, ಸ್ಕಿನ್ ಇಲ್ಯಾಸ್ಟಿಸಿಟಿ ಹೆಚ್ಚುತ್ತದೆ.
* 1 ಚಮಚ ಕಾಫಿ, 1 ಚಮಚ ಮೊಸರು, 2 ಚಮಚ ಜೇನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಉಗುರು ಬಿಸಿ ನೀರಿನಲ್ಲಿ ಮುಖ ತೊಳೆಯಿರಿ. ನಂತರ ಮಾಯಿಶ್ಚರೈಸ್ ಕ್ರೀಂ ಹಚ್ಚಿ.
* ಕಾಫಿ ಪುಡಿಗೆ 1 ಚಮಚ ಜೇನು ತುಪ್ಪ ಮಿಕ್ಸ್ ಮಾಡಿ, ಅದಕ್ಕೆ ಎರಡು ಹನಿ ನಿಂಬೆ ರಸ ಸೇರಿಸಿ ಮುಖದ ಮೇಲಿನ ಪಿಂಪಲ್‌ಗೆ ಹಚ್ಚಿ. ಇದರಿಂದ ಪಿಂಪಲ್ ಸಮಸ್ಯೆ ನಿವಾರಣೆಯಾಗುತ್ತದೆ.
* ಸಾಫ್ಟ್ ಸ್ಕಿನ್ ಪಡೆಯಲು ಒಂದು ಚಮಚ ಕಾಫಿ ಪೌಡರ್‌ಗೆ ಒಂದು ಚಮಚ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ. ಇದೊಂದು ಉತ್ತಮ ಸ್ಕ್ರಬ್‌ನಂತೆ ಕೆಲಸ ಮಾಡುತ್ತದೆ.