ಬೆಂಗಳೂರು : ಮುಖ ಹಾಗೂ ಕೂದಲ ಸೌಂದರ್ಯಕ್ಕೆ ನಾವು ಎಷ್ಟೆಲ್ಲಾ ಖರ್ಚು ಮಾಡುತ್ತೇವೆ. ಸಾಕಷ್ಟು ರಾಸಯನಿಕ ಕ್ರೀಮ್, ಶಾಂಪೂಗಳನ್ನು ಉಪಯೋಗಿಸುತ್ತೇವೆ. ತೆಂಗಿನೆಣ್ಣೆಯನ್ನು ಬಳಸಿಕೊಂಡು ಕೂಡ ನಾವು ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಸೊಂಪಾದ ಕೂದಲಿಗಾಗಿ
ತೆಂಗಿನೆಣ್ಣೆಯನ್ನು ಹದವಾಗಿ ಬಿಸಿ ಮಾಡಿಕೊಂಡು ತಲೆಗೆ ಚೆನ್ನಾಗಿ ಮಸಾಜ್ ಮಾಡಿದರೆ ಕೂದಲು ಕಪ್ಪಾಗುತ್ತದೆ ಜತೆಗೆ ಸೊಂಪಾಗಿ ಬೆಳೆಯುತ್ತದೆ.
ಒಣ ತ್ವಜೆಯ ನಿವಾರಣೆ
ಮೈಗೆ ದಿನಾ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಒಣ ತ್ವಚೆಯ ಕಿರಿಕಿರಿಯಿಂದ ಪಾರಾಗಬಹುದು.
ಮೊಡವೆ ನಿವಾರಣೆ
ಒಂದು ಚಮಚ ತೆಂಗಿನೆಣ್ಣೆ ತೆಗೆದುಕೊಂಡು ಮುಖಕ್ಕೆ ಹಗುರವಾಗಿ ಮಸಾಜ್ ಮಾಡಿಕೊಳ್ಳಿ. ಆಮೇಲೆ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖವೂ ಹೊಳೆಯುತ್ತದೆ. ಮೊಡವೆ ಸಮಸ್ಯೆಯೂ ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ