ಬೆಂಗಳೂರು : ಉಪ್ಪು ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ ಎಂದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಇದು ಅಡುಗೆಯ ಜೊತೆಗೆ ನಮ್ಮ ಅಂದವನ್ನು ಹೆಚ್ಚಿಸಲು ಕೂಡ ಉಪಯೋಗಕಾರಿಯಾಗಿದೆ. ಅದು ಹೇಗೆಂಬುದು ಇಲ್ಲಿದೆ ನೋಡಿ.
*ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ತೆಗೆದುಕೊಂಡು ನೀವು ಬಳಸುವ ಶಾಂಪ್’ನಲ್ಲಿ ಕಲಸಬೇಕು. ಈಗ ತಲೆಸ್ನಾನ ಮಾಡಿದರೆ ನಿಮ್ಮ ಕೂದಲಿನ ಜಿಡ್ಡು ಕೊಗುವುದಷ್ಟೆ ಅಲ್ಲ, ಶಾಂಪು ಹಾಕಿದಾಗ ಕಂಡಿಷನರ್ ಬಳಸುವ ಅವಶ್ಯಕತೆ ಇಲ್ಲ. ಇದು ಒಳ್ಳೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ಕೂದಲು ಉದರುವುದು ಕಡಿಮೆಯಾಗಿ ಬೆಳೆಯುವುದನ್ನು ಗಮನಿಸಬಹುದು.
*ಉಪ್ಪು ನಮಗೆ ಒಂದು ಒಳ್ಳೆಯ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ನಾವು ಬಳಸುವ ಫೇಷಿಯಲ್ ಕ್ರೀಮ್’ಗೆ ಸ್ವಲ್ಪ ಉಪ್ಪನ್ನು ಸೇರಿಸಿ ಮುಖಕ್ಕೆ ಅಪ್ಲೇ ಮಾಡಿ, ಹಚ್ಚಿದರೆ ಚರ್ಮರಂಧ್ರಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಜಿಡ್ಡಿನು ಕಡಿಮೆ ಮಾಡಿ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
*ಪಾದಗಳು ಒಡೆದು, ಬೆರಳುಗಳ ಮಧ್ಯೆ ಚರ್ಮ ಡ್ರೈಯಾಗಿ ತೊಂದರೆಯಾಗಿದ್ದರೆ ಸ್ವಲ್ಪ ಆಲಿವ್ ಎಣ್ಣೆಯಲ್ಲಿ ಉಪ್ಪನ್ನು ಕಲಸಿ ಆ ಮಿಶ್ರಣವನ್ನು ಅಪ್ಲೇ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ