Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಸ್ತು ಪ್ರಕಾರ ದಕ್ಷಿಣಕ್ಕೆ ಮನೆ ಬಾಗಿಲು ಇರಬಾರದು ಯಾಕೆ?

Astrology

Krishnaveni K

ಬೆಂಗಳೂರು , ಭಾನುವಾರ, 28 ಜನವರಿ 2024 (10:44 IST)
ಬೆಂಗಳೂರು: ಸಾಮಾನ್ಯವಾಗಿ ಮನೆ ಕಟ್ಟುವಾಗ ಅಥವಾ ಹೊಸ ಮನೆ ಖರೀದಿಸುವಾಗ ಇಲ್ಲವೇ ಬಾಡಿಗೆಗೆ ಪಡೆಯುವಾಗ ಯಾವ ದಿಕ್ಕಿಗೆ ಮನೆ ಬಾಗಿಲಿದೆ ಎಂದು ನೋಡುತ್ತೇವೆ.

ಪೂರ್ವ ಭಾಗಕ್ಕೆ ಮನೆಯ ಮುಂಬಾಗಿಲು ಇದ್ದರೆ ಉತ್ತಮ ಎನ್ನುತ್ತೇವೆ. ಆದರೆ ಮನೆಯ ಬಾಗಿಲು ದಕ್ಷಿಣಕ್ಕೆ ಮುಖ ಮಾಡಿದ್ದರೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಿದ್ದರೆ ದಕ್ಷಿಣಕ್ಕೆ ಮನೆಯ ಬಾಗಿಲು ಇರುವುದು ಯಾಕೆ ಒಳ್ಳೆಯದಲ್ಲ? ನೋಡೋಣ.

ವಾಸ್ತು ಪ್ರಕಾರ ದಕ್ಷಿಣಕ್ಕೆ ಮುಖ ಮಾಡಿ ಬಾಗಿಲು ಇದ್ದರೆ ಅದನ್ನು ದುರಾದೃಷ್ಟ ಎನ್ನಲಾಗುತ್ತದೆ. ಮನೆ ಯಾವ ದಿಕ್ಕಿಗೆ ಇದೆ ಎನ್ನುವುದು ಆ ಮನೆಯಲ್ಲಿ ವಾಸಿಸುವವರ ಯೋಗ ಕ್ಷೇಮವನ್ನು ನಿರ್ಧರಿಸುತ್ತದೆ. ಇದು ಕೇವಲ ನಂಬಿಕೆ ಮಾತ್ರವಲ್ಲದೆ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ.

ದಕ್ಷಿಣ ದಿಕ್ಕಿಗೆ ಸೂರ್ಯನ ಬೆಳಕು ಬೀರುವುದು ಕಡಿಮೆ. ಸೂರ್ಯ ನಮಗೆ ಚೈತನ್ಯ ತುಂಬುವವನು. ಹೀಗಾಗಿ ಅಂಧಕಾರ ಆರ್ಥಿಕ, ಆರೋಗ್ಯ ಸಮಸ್ಯೆ ತಂದೊಡ್ಡಬಹುದು ಎಂಬ ನಂಬಿಕೆಯಿದೆ. ನಾವು ವಾಸಿಸುವ ಮನೆಗೆ ಗಾಳಿ, ಬೆಳಕು ಕೂಡಾ ಅಷ್ಟೇ ಮುಖ್ಯ. ಇದು ವೈಜ್ಞಾನಿಕ ದೃಷ್ಟಿಯಿಂದಲೂ ಉಪಯುಕ್ತ.

ದಕ್ಷಿಣಾಭಿಮುಖವಾಗಿ ಮನೆಯಿದ್ದರೆ ಆರೋಗ್ಯ, ಆರ್ಥಿಕ ಸಮಸ್ಯೆಗಳು ಕಾಡಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಪೂರ್ವ ಇಲ್ಲವೇ ಉತ್ತರಾಭಿಮುಖವಾಗಿದ್ದರೂ ಮನೆಯಿಂದ ನಮಗೆ ಸಮಸ್ಯೆಯಾಗದು ಎಂಬುದು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?