ಬೆಂಗಳೂರು: ಜೀವನದಲ್ಲಿ ಶತ್ರುಗಳು ಎಲ್ಲಿದ್ದಾರೆಂದರೆ ನಮ್ಮ ಬೆನ್ನ ಹಿಂದೆಯೇ ಇರುತ್ತಾರೆ ಎಂಬ ಮಾತಿದೆ. ಆದರೆ ವೇದಾಂತದ ಪ್ರಕಾರ ನಮ್ಮ ಶತ್ರುಗಳು ನಮ್ಮೊಳಗೇ ಇರುತ್ತಾರೆ.
ನಮ್ಮ ಜೀವನದ ಆರು ವೈರಿಗಳಿದ್ದಾರೆ. ಅವುಗಳೆಂದರೆ ಮೊದಲನೆಯದಾಗಿ ಕಂಡದ್ದನ್ನು ಬಯಸುವುದು. ಬಯಸಿದ್ದನ್ನು ದೊರೆಯದಿದ್ದರೆ ಕ್ರೋಧ ಬರುವುದು ಎರಡನೆಯ ಶತ್ರು.
ದೊರೆತರೆ ಇನ್ನಷ್ಟು ದೊರೆಯಲೆಂಬ ಲೋಭ ಮೂರನೆಯ ಶತ್ರು. ಇನ್ನಷ್ಟು ದೊರೆತರೆ ಅದು ತನ್ನ ಕೈ ಬಿಟ್ಟು ಹೋಗಬಾರದೆಂಬುದೆ ಮೋಹ ಎಂಬುದು ನಾಲ್ಕನೆಯ ಶತ್ರು. ಅದು ತನ್ನೊಬ್ಬನಲ್ಲೇ ಇರಬೇಕೆಂಬ ಮೋಹ ಐದನೆಯ ಶತ್ರು. ತನ್ನಲ್ಲಿರುವುದು ಬೇರೊಬ್ಬರಲ್ಲಿಯೂ ಇದೆ ಎನ್ನುವುದೇ ಆರನೆಯ ಶತ್ರು.