Publish Date: Tue, 15 Jan 2019 (08:57 IST)
Updated Date: Tue, 15 Jan 2019 (08:58 IST)
ಬೆಂಗಳೂರು: ನಾವು ಮಾಡುವ ಕೆಲಸಗಳಲ್ಲಿ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇದೆಲ್ಲವನ್ನೂ ಮೇಲೆ ಕೂತ ಭಗವಂತ ನೋಡುತ್ತಿರುತ್ತಾನೆ. ನಮ್ಮ ಕಾರ್ಯಕ್ಕೆ ಅನುಸಾರವಾಗಿ ನಮ್ಮ ಪಾಪದ ಲೆಕ್ಕ ಭರ್ತಿಯಾಗುತ್ತಾ ಹೋಗುತ್ತದೆ ಎಂಬ ನಂಬಿಕೆಯಿದೆ.
ಹಾಗಿದ್ದರೆ ಪಾಪದ ಫಲ ಯಾರಿಗೆ ಮತ್ತು ಹೇಗೆ ಸಿಗುತ್ತದೆ? ಕೆಲವೊಮ್ಮೆ ನಾವು ಪ್ರತ್ಯಕ್ಷವಾಗಿ ಕೆಡುಕು ಮಾಡದೇ ಇದ್ದರೂ, ನಾವು ಮಾಡುವ ಕೆಲಸಗಳಿಂದ ಇನ್ನೊಬ್ಬರಿಗೆ ತೊಂದರೆಯಾದರೂ ಅದರ ಫಲ ನಾವು ಅನುಭವಿಸಬೇಕಾಗುತ್ತದೆ.
ನಾವು ಯಾರಾದರೊಬ್ಬರ ಪಾಪದ ಕೆಲಸಗಳನ್ನು ಮಾತನಾಡುವುದು, ಅದರ ಬಗ್ಗೆ ಆಡಿಕೊಳ್ಳುವುದು, ಮತ್ತು ನಾವು ಇನ್ನೊಬ್ಬರ ಬಗ್ಗೆ ಸುಳ್ಳು ಅಪವಾದ ಹೊರಿಸುವುದು ಮಾಡಿದರೆ ಆ ಪಾಪದ ಫಲ ನಮ್ಮ ಲೆಕ್ಕಕ್ಕೇ ಸೇರಿಸಲ್ಪಡುವುದು. ಆದ್ದರಿಂದ ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಬೇಕಾದ್ದು ಅಗತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Tue, 15 Jan 2019 (08:57 IST)
Updated Date: Tue, 15 Jan 2019 (08:58 IST)