Publish Date: Wed, 05 Aug 2020 (11:41 IST)
Updated Date: Wed, 05 Aug 2020 (11:42 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣಸ್ವಭಾವ ಒಂದೊಂದು ರೀತಿಯಿದ್ದಾಗಿರುತ್ತದೆ. ಹಾಗೆಯೇ ಅವರು ಇನ್ನೊಬ್ಬರ ಜತೆ ಹೊಂದಿಕೊಳ್ಳುವ ರೀತಿಯೂ ಬೇರೆಯದೇ ಆಗಿರುತ್ತದೆ. ಅದೇ ರೀತಿ ಯಾವ ರಾಶಿಯವರು ತಮ್ಮ ಸಂಗಾತಿಯ ಜತೆ ಹೇಗಿರುತ್ತಾರೆ, ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನೋಡೋಣ.
ಧನು
ನಿಮಗೆ ಅರಿವಿಲ್ಲದಂತೆಯೇ ಇವರ ಮಾತಿನ ಮೋಡಿಗೆ ಮರುಳಾಗುತ್ತೀರಿ. ಅವರ ಮೋಡಿಯಲ್ಲಿ ಮೈಮರೆಯುತ್ತೀರಿ. ಕೆಲವೊಮ್ಮೆ ನಿಮಗೆ ಗೊತ್ತಾಗಬಾರದೆಂದು, ನೋವಾಗಬಾರದೆಂದು ಸತ್ಯ ಮರೆಮಾಚಲೂ ಹಿಂದೆ ಮುಂದೆ ನೋಡಲ್ಲ. ಆದರೆ ಅದೂ ನಿಮ್ಮ ಒಳ್ಳೆಯದಕ್ಕೇ ಆಗಿರುತ್ತದೆ. ನಿಮಗೆ ನೋವು ಮಾಡಿದವರಿಗೆ ತಿರುಗಿ ಹೊಡೆಯಲೂ ಹಿಂದೆ ಮುಂದೆ ನೋಡಲ್ಲ.