ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಭರಣಿ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.
ಭರಣಿ
ಭರಣಿ ನಕ್ಷತ್ರದವರು ಧರಣಿ ಆಳುತ್ತಾರೆ ಎಂಬ ಮಾತಿದೆ. ಅದರಂತೆ ಈ ನಕ್ಷತ್ರದವರು ಸ್ವ ಹಿತಾಸಕ್ತಿಯನ್ನು ಹೆಚ್ಚು ನೋಡಿಕೊಳ್ಳುತ್ತಾರೆ ಮತ್ತು ಸ್ವ ಅಭಿವೃದ್ಧಿ ಕಡೆಗೆ ಹೆಚ್ಚು ಗಮನಕೊಡುತ್ತಾರೆ. ಈ ನಕ್ಷತ್ರದವರು ಏನೇ ಮಾಡುವುದಿದ್ದರೂ ಹತ್ತು ಸಲ ಯೋಚನೆ ಮಾಡುತ್ತಾರೆ. ಇವರ ಅಧಿಪತಿ ಶುಕ್ರ. ಹೀಗಾಗಿ ಇವರು ದುರ್ಗಾ ದೇವಿಯ ಆರಾಧನೆ ಮಾಡುವುದು ಒಳಿತು.