Publish Date: Thu, 22 Oct 2020 (09:22 IST)
Updated Date: Thu, 22 Oct 2020 (09:24 IST)
ಬೆಂಗಳೂರು: ಅಡುಗೆ ಮನೆಯಲ್ಲಿ ಯಾವ ಕಡೆಗೆ ಮುಖ ಮಾಡಿ ಅಡುಗೆ ಮಾಡಬೇಕು ಎನ್ನುವಷ್ಟೇ ತರಕಾರಿಗಳನ್ನು ಕಟ್ ಮಾಡುವಾಗಲೂ ಯಾವ ಕಡೆಗೆ ಮುಖ ಮಾಡಿ ಕತ್ತರಿಸಬೇಕು ಎನ್ನುವುದೂ ಮುಖ್ಯವೇ.
ದಕ್ಷಿಣ ದಿಕ್ಕಿಗೆ ಮುಖ ಮಾಡಿ ತರಕಾರಿ ಕತ್ತರಿಸುವುದರಿಂದ ಮಹಿಳೆಯರಿಗೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ದಕ್ಷಿಣ-ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕತ್ತರಿಸುವುದರಿಂದ ಮನೆಯಲ್ಲಿ ಸುಖ ಶಾಂತಿಯಿರದು. ಪಶ್ಚಿಮ ದಿಕ್ಕಿಗೆ ಮುಖ ಮಾಡಿ ತರಕಾರಿ ಕತ್ತರಿಸುವುದು, ಅಡುಗೆ ಮಾಡುವುದರಿಂದ ಚರ್ಮ ಸಂಬಂಧೀ ಸಮಸ್ಯೆ ಬರಬಹುದು. ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು, ತರಕಾರಿ ಕತ್ತರಿಸುವುದು ಶ್ರೇಯಸ್ಕರ.