Publish Date: Sat, 26 Dec 2020 (09:10 IST)
Updated Date: Sat, 26 Dec 2020 (09:12 IST)
ಬೆಂಗಳೂರು: ವಾಸ್ತು ಪ್ರಕಾರ ಮನೆಯ ಮುಖ್ಯದ್ವಾರವೆಂದರೆ ಕೇವಲ ಅದು ನಾವು ಮನೆಯೊಳಗೆ ಕಾಲಿಡಲು ಇರುವ ದಾರಿ ಮಾತ್ರವಲ್ಲ, ಇದು ನಮ್ಮ ಮನೆಗೆ ಸಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ನಿರ್ಧರಿಸುವ ದಾರಿ.
ನಮಗೆ ಜೀವನದಲ್ಲಿ ಜಯ, ಯಶಸ್ಸು ಸಿಗಬೇಕೆಂದರೆ ಮನೆಯ ಮುಖ್ಯ ದ್ವಾರ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಮುಖ ಮಾಡಿಕೊಂಡಿರಬೇಕು. ಮನೆಯ ಮುಖ್ಯದ್ವಾರದ ಬಾಗಿಲಿಗೆ ಗುಣಮಟ್ಟದ ಮರ ಬಳಸಬೇಕು. ಮುಖ್ಯ ದ್ವಾರದ ಸಮೀಪವೇ ಬಾತ್ ರೂಂ ಅಥವಾ ಟಾಯ್ಲೆಟ್ ಇರಬಾರದು. ಮುಖ್ಯದ್ವಾರದ ಬಾಗಿಲಿಗೆ ಕಪ್ಪು ಬಣ್ಣ ಬಳಿಯಬೇಡಿ. ಮುಖ್ಯ ದ್ವಾರದ ಸಮೀಪ ಪ್ರಾಣಿಗಳ ಮೂರ್ತಿ ಇಡಬೇಡಿ. ಮುಖ್ಯವಾಗಿ, ಈ ಬಾಗಿಲು ಪ್ರದಕ್ಷಿಣೆ ಆಕಾರದಲ್ಲಿ ತೆರೆಯುವಂತೆ ನೋಡಿಕೊಳ್ಳಿ.