ಬೆಂಗಳೂರು: ಇಂದು ಗ್ರಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣವಿದೆ. ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಹಣವು ಈ ನಕ್ಷತ್ರ ರಾಶಿಯವರಿಗೂ ವೃಶ್ಚಿಕ, ವೃಷಭ, ಮೀನ ರಾಶಿಯವರಿಗೂ ಅರಿಷ್ಟವಿದೆ.
ಪಂಚಾಂಗ ಪ್ರಕಾರ ಇಂದು ಪ್ರಾತಃ ಕಾಲ ಘಂಟೆ 5.09 ರ ಒಳಗೆ ಆಹಾರ ಸೇವಿಸಬಹುದು. ಬಾಲವೃದ್ಧಾತುರರು ಮಧ‍್ಯಾಹ್ನ ಒಂದು ಗಂಟೆಯ ಒಳಗೆ ಭೋಜನ ಮಾಡಬಹುದು. ಗ್ರಹಣ ಕಾಲದಲ್ಲೇ ಸೂರ್ಯಾಸ್ತವಾಗುವುದರಿಂದ ಮರುದಿನ ಸ್ನಾನಾ ನಂತರ ಉಪಾಹಾರ ಸೇವಿಸಬೇಕು.
ಗ್ರಹಣ ಮಧ‍್ಯ ಕಾಲ 5.48 ಘಂಟೆ, ಸೂರ್ಯಾಸ್ತ ಕಾಲ 6.04. ಮೋಕ್ಷ ಕಾಲ 6.29 ಘಂಟೆ. ಈ ದಿನ ಶ್ರಾದ್ಧ ಕಾರ್ಯವಿದ್ದರೆ ಮರುದಿನ ಮಾಡತಕ್ಕದ್ದು.
-Edited by Rajesh Patil