Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.
ಧನಿಷ್ಠ
ತಮ್ಮ ಆತ್ಮೀಯರಿಗೆ ಎಂಥದ್ದೇ ಕಷ್ಟ ಬಂದರೂ ಜತೆಗೇ ನಿಲ್ಲುವ ಪರೋಪಕಾರಿ ಮನೋಭಾವದವರು. ತಮ್ಮ ಕುಟುಂಬದವರು, ಒಡಹುಟ್ಟಿದವರ ಮೇಲೆ ಅಪಾರ ಪ್ರೀತಿ, ಒಡನಾಟ ಹೊಂದಿರುತ್ತಾರೆ. ಕಲೆ, ಸಾಹಿತ್ಯವನ್ನು ಇಷ್ಟಪಡುತ್ತಾರೆ. ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವದವರು. ಆದರೆ ಇವರ ಆಕ್ರಮಣಕಾರಿ ಸ್ವಭಾವವೇ ಶತ್ರುವಾಗಿರುತ್ತದೆ. ಈ ನಕ್ಷತ್ರದವರಿಗೆ ಗಾ, ಗೀ, ಗೂ ಮತ್ತು ಗೇ ಕಾರದಿಂದ ಬರುವ ಹೆಸರಿಡಬಹುದು.