ಬೆಂಗಳೂರು: ಮಾತು ಆಡಿದರೆ ಹೋಯಿತು, ಮುತ್ತ ಒಡೆದರೆ ಹೋಯಿತು ಎಂಬ ಮಾತಿದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅವರು ಆಡುವ ಮಾತಿನಿಂದಲೇ ತಿಳಿಯಬಹುದು. ಇಂತಹ ಮಾತಿಗೆ ಯಾರು ಅಧಿಪತಿ, ಯಾವ ಗ್ರಹ ಮಾತಿನ ನಿಯಂತ್ರಕ ಎಂದು ತಿಳಿಯೋಣ.
ಮಾತಿಗೆ ಶುಭ ಗ್ರಹಗಳಾದ ಚಂದ್ರ, ಗುರು ಮತ್ತು ಶುಕ್ರ ಗ್ರಹಗಳು ಕಾರಣ. ಜಾತಕ ಕುಂಡಲಿಯಲ್ಲಿ ಲಗ್ನದಿಂದ ಎರಡನೇ ಮನೆ ಮಾತಿಗೆ ಅಧಿಪತಿ. ಎರಡನೇ ಮನೆಯಲ್ಲಿ ಯಾವ್ಯಾವ ಗ್ರಹಗಳು ಇದ್ದರೆ ಮಾತು ಹೇಗಿರುತ್ತವೆ ಎಂದು ನೋಡೋಣ.
ಎರಡನೇ ಮನೆಯಲ್ಲಿ ಗುರು ಚಂದ್ರರಿದ್ದರೆ
ಜಾತಕದಲ್ಲಿ ಎರಡನೇ ಮನೆಯಲ್ಲಿ ಗುರು ಚಂದ್ರರಿದ್ದು ಅದಕ್ಕೆ 10 ನೇ ಮನೆಯ ಅಧಿಪತಿಯ ದೃಷ್ಟಿ ಇದ್ದರೆ ವೇದಾಧ್ಯಯನ ಸಂಪನ್ನರಾಗುತ್ತಾರೆ. ಇವರು ಸಕಲ ಪಾರಂಗತರಾಗುತ್ತಾರೆ. ವೇದ ಪಂಡಿತರಾಗಿರುತ್ತಾರೆ.