ಬೆಂಗಳೂರು: ಮಾತು ಆಡಿದರೆ ಹೋಯಿತು, ಮುತ್ತ ಒಡೆದರೆ ಹೋಯಿತು ಎಂಬ ಮಾತಿದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅವರು ಆಡುವ ಮಾತಿನಿಂದಲೇ ತಿಳಿಯಬಹುದು. ಇಂತಹ ಮಾತಿಗೆ ಯಾರು ಅಧಿಪತಿ, ಯಾವ ಗ್ರಹ ಮಾತಿನ ನಿಯಂತ್ರಕ ಎಂದು ತಿಳಿಯೋಣ.
ಮಾತಿಗೆ ಶುಭ ಗ್ರಹಗಳಾದ ಚಂದ್ರ, ಗುರು ಮತ್ತು ಶುಕ್ರ ಗ್ರಹಗಳು ಕಾರಣ. ಜಾತಕ ಕುಂಡಲಿಯಲ್ಲಿ ಲಗ್ನದಿಂದ ಎರಡನೇ ಮನೆ ಮಾತಿಗೆ ಅಧಿಪತಿ. ಎರಡನೇ ಮನೆಯಲ್ಲಿ ಯಾವ್ಯಾವ ಗ್ರಹಗಳು ಇದ್ದರೆ ಮಾತು ಹೇಗಿರುತ್ತವೆ ಎಂದು ನೋಡೋಣ.
ಎರಡನೇ ಮನೆಯಲ್ಲಿ ಶುಭ್ರ ಗ್ರಹ
ಎರಡನೇ ಮನೆಯಲ್ಲಿ ಮತ್ತು 9 ನೇ ಮನೆಯಲ್ಲಿ ಶುಭ ಗ್ರಹ ಇದ್ದರೆ ಆಧ‍್ಯಾತ್ಮಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪ್ರವಚನ ಮಾಡುವವರಾಗಿರುತ್ತಾರೆ. ಇವರಿಗೆ ಧಾರ್ಮಿಕ ಶ್ರದ್ಧೆ ಜಾಸ್ತಿ. ಇವರು ಹೆಚ್ಚಾಗಿ ಧಾರ್ಮಿಕ ಪಾರಾಯಣ, ದೇವರ ವಿಚಾರಕ್ಕೆ ಸಂಬಂಧಿಸಿದ ಮಾತನಾಡುತ್ತಲೇ ಕಾಲ ಕಳೆಯುತ್ತಾರೆ.